ಹೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ ಕೇಸ್‌; 1,401 ಸ್ಕೂಟರ್​ ವಾಪಸ್​ ಪಡೆದ ಓಲಾ

ಹೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ ಕೇಸ್‌; 1,401 ಸ್ಕೂಟರ್​ ವಾಪಸ್​ ಪಡೆದ ಓಲಾ

ನವದೆಹಲಿ: ದೇಶದ ಹಲವೆಡೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸ್ಫೋಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಲಾ ಕಂಪನಿ 1,400 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಾಪಸ್ ಪಡೆದಿದೆ. ಪುಣೆಯಲ್ಲಿ ಮಾರ್ಚ್ 26ರಂದು ಸಂಭವಿಸಿದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ಜನರ ಹಿತದೃಷ್ಟಿಯಿಂದ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿರುವ 1,441 ಸ್ಕೂಟರ್‌ಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ಫೋಟಗೊಳ್ಳಲು ಕಾರಣವೇನು ಎಂದು ಇಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಟರಿ, ಚಾರ್ಜರ್, ವಯರಿಂಗ್ ಸೇರಿದಂತೆ ಪ್ರತಿಯೊಂದನ್ನು ಅಭ್ಯಾಸಿಸಿ ಸೂಕ್ತ ಪರಿಹಾರ ಕಂಡುಕೊಂಡ ನಂತರ ಸ್ಕೂಟರ್ ಗಳನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಓಲಾ ತಿಳಿಸಿದೆ.