ಸರ್ಕಾರಿ ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆಗೆ ಬೀಳಲಿದೆ ಬ್ರೇಕ್ - UPI ಅಳವಡಿಸಲು ಕೆಎಸ್‌ಆರ್‌ಟಿಸಿ ಪ್ಲಾನ್

ಚಿಲ್ಲರೆಗಾಗಿ ನಿತ್ಯ ಒಂದಿಲ್ಲೊಂದು ಬಸ್‌ನಲ್ಲಿ ನಿರ್ವಾಹಕ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ, ಜಗಳ ನಡೆಯುತ್ತದೆ. ಚಿಲ್ಲರೆ ಕೊಡಿ ಅಂತಾ ನಿರ್ವಾಹಕರು ಹೇಳಿದರೆ, ನೀವು ಚಿಲ್ಲರೆ ಇಟ್ಟುಕೊಂಡು ಬರೆಬೇಕು ಅಂತಾ ನಿರ್ವಾಹಕರು ಗೊಣಗುತ್ತಿರುತ್ತಾರೆ. ಈಗ ಈ ಎಲ್ಲಾ ಜಗಳಗಳಿಗೆ ಫುಲ್ ಸ್ಟಾಪ್ ಇಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.
ಹೌದು, ಕೆಎಸ್‌ಆರ್‌ಟಿಸಿಯನ್ನು ಕ್ಯಾಶ್‌ಲೆಸ್ ಮಾಡಲು ಹೊರಟಿದೆ. Google Pay, Phone Pay ಮತ್ತು Paytm ಮೂಲಕ ಪಾವತಿಸಲು ಪ್ರಯಾಣಿಕರಿಗೆ ಅನುವು ಮಾಡಿಕೊಡುವ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಲು KSRTC ಯೋಜಿಸುತ್ತಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ.
KSRTC ಖಾಸಗಿ ಕಂಪನಿಯಿಂದ 10245 ಸಾವಿರ ETM ಟಿಕೆಟ್ ಯಂತ್ರಗಳನ್ನು ತಿಂಗಳಿಗೆ 645 ರೂ ಬಾಡಿಗೆ ದರದಲ್ಲಿ ಖರೀದಿಸಲು ಮುಂದಾಗಿದೆ. ಇನ್ನು ಮುಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಗೂಗಲ್ ಪೇ, ಫೋನ್ ಪೇ. Paytm ಮೂಲಕ ಪಾವತಿಸುವ ಮೂಲಕ ನೀವು ಟಿಕೆಟ್‌ಗಳನ್ನು ಖರೀದಿಸಬಹುದು ಮತ್ತು ಪ್ರಯಾಣಿಸಬಹುದು. ಈ ಹೊಸ ಯಂತ್ರಗಳನ್ನು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಲು ಬಳಸಬಹುದು.