ICC T20 World Cup : ಆಸೀಸ್-ಆಫ್ರಿಕಾ ಸೆಣಸಾಟ ಇಂದಿನಿಂದ ಐಸಿಸಿ ಟಿ20 ವಿಶ್ವಕಪ್ ಆರನೇ ಆವೃತ್ತಿ ಆರಂಭಗೊಳ್ಳಲಿದೆ.

ICC T20 World Cup : ಆಸೀಸ್-ಆಫ್ರಿಕಾ ಸೆಣಸಾಟ ಇಂದಿನಿಂದ ಐಸಿಸಿ ಟಿ20 ವಿಶ್ವಕಪ್ ಆರನೇ ಆವೃತ್ತಿ ಆರಂಭಗೊಳ್ಳಲಿದೆ.

ಈಗಾಗಲೇ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, 4 ತಂಡಗಳು ಸೇರಿದಂತೆ ಒಟ್ಟು 12 ತಂಡಗಳ ಮುಖಾಮುಖಿಯಾಗಲಿವೆ.ಇಂದಿನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಸೆಣೆಸಾಟ ನಡೆಸಲಿವೆ. ಕಾಂಗರೂ ಪಡೆಯನ್ನು ಆಯರೋನ್ ಫಿಂಚ್ ಮುನ್ನಡೆಸಿದರೆ, ಆಫ್ರಿಕಾಕ್ಕೆ ತೆಂಬಾ ಬವುಮಾ ನಾಯಕನಾಗಿದ್ದಾರೆ. ಉಭಯ ತಂಡಗಳಿಗೂ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿ ಮಹತ್ವದ್ದಾಗಿದೆ. ಇಂದಿನ ಆಸೀಸ್-ಆಫ್ರಿಕಾ ಪ್ರದರ್ಶನ ಯಾವರೀತಿ ಇರಬಹುದು ಎಂಬುದು ಕಾದುನೋಡಬೇಕಿದೆ. ಉಭಯ ತಂಡಗಳು ಈವರೆಗೆ ಒಟ್ಟು 22 ಬಾರಿ ಟಿ20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ 13 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೆ, ದಕ್ಷಿಣ ಆಫ್ರಿಕಾ ಎಂಟು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಪಂದ್ಯ ಆರಂಭ: ಮಧ್ಯಾಹ್ನ 3:30ಕ್ಕೆ, ಅಬುಧಾಬಿಯ ಶೇಕ್ ಝಯೇದ್ ಸ್ಟೇಡಿಯಂ.