ಐಎಎಫ್ ನ ಮಿಗ್ -21 ವಿಮಾನ ಅಪಘಾತ

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಊಟಿ ಬಳಿಯ ಕೂನೂರಿನಲ್ಲಿ ಪತನವಾಗಿ ಈ ದುರಂತದಲ್ಲಿ 14 ಜನ ಮೃತಪಟ್ಟರು. ಈ ಸುದ್ದಿ ಮಾಸುವ ಮುನ್ನವೇ ಇಂದು ಡಿ.24 ರ ಸಂಜೆ 8:30 ರ ಸುಮಾರಿಗೆ ಐಎಎಫ್ ನ ಮಿಗ್ -21 ತರಬೇತಿ ವಿಮಾನವೊಂದು ಪಶ್ಚಿಮ ವಲಯದಲ್ಲಿ ಅಪಘಾತಕ್ಕೆ ಒಳಗಾಗಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ. ಸ್ಯಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಡೆಸರ್ಟ್ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಜೈಸಲ್ಮೇರ್ ಎಸ್ಪಿ ಅಜಯ್ ಸಿಂಗ್ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಅವರು ಕೂಡ ಅಪಘಾತ ಸ್ಥಳಕ್ಕೆ ತೆರಳುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಸುದಾಸರಿ ಬಳಿ ಮರಳು ದಿಬ್ಬಗಳಲ್ಲಿ ವಿಮಾನ ಪತನಗೊಂಡಿದೆ ಜೊತೆಗೆ ಪೈಲಟ್ ಮೃತದೇಹ ಕೂಡಾ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇದುವರೆಗೂ ಭಾರತೀಯ ವಾಯುಪಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪೈಲಟ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಆದರೆ ಅವರು ಅಪಘಾತದ ಸ್ಥಳದ ಬಳಿ ಮಾಂಸದ ತುಂಡುಗಳನ್ನು ಗುರುತಿಸಿ ಮಾಹಿತಿ ನೀಡಿದ್ದಾರೆ. ಇನ್ನು ಈ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.