ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ರಾಯಭಾರಿಯಾಗಿ ಕಂಗನಾ ರಣಾವತ್‌ ನೇಮಕ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ರಾಯಭಾರಿಯಾಗಿ ಕಂಗನಾ ರಣಾವತ್‌ ನೇಮಕ

ನವದೆಹಲಿ : ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಇಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ. ಹೌದು ಭಾರತದ ಪ್ಯಾರಾಲಿಂಪಿಕ್ ಸಮಿತಿಯು , ನಟಿ ಮತ್ತು ರಾಜಕಾರಣಿ ಕಂಗನಾ ರಣಾವತ್‌ ಅವರನ್ನು 2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಘೋಷಿಸಿದೆ. 

ಕಂಗನಾ ಅವರು ಭಾರತದಲ್ಲಿ ಪ್ಯಾರಾ ಅಥ್ಲೆಟಿಕ್ಸ್‌ಗೆ ನವೀಕೃತ ಶಕ್ತಿ, ಗೋಚರತೆ ಮತ್ತು ಗಮನವನ್ನು ತರುವ ನಿರೀಕ್ಷೆ ನಮಗಿದೆ. ಕಂಗನಾ ಅವರ ಹೊಸ ಪಾತ್ರದಲ್ಲಿ, ಚಾಂಪಿಯನ್‌ಶಿಪ್‌ಗಳ ಮೂಲ ಮೌಲ್ಯಗಳನ್ನು ಉತ್ತೇಜಿಸುತ್ತಾರೆ ಎಂದು ಪಿಸಿಐ ತಿಳಿಸಿದೆ. 

ಈ ಬಗ್ಗೆ ಕಂಗನಾ ರಣಾವತ್‌ ಅವರು ಸಮಾರಂಭದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಪ್ಯಾರಾ ಅಥ್ಲೀಟ್‌ಗಳನ್ನು ಬೆಂಬಲಿಸಲು ಮತ್ತು ಅವರ ಅಸಾಧಾರಣ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ನನಗೆ ತುಂಬಾ ಗೌರವವಿದೆ. ನಮ್ಮ ಚಾಂಪಿಯನ್‌ಗಳ ಹಿಂದೆ ನಿಲ್ಲಲು ನನಗೆ ಹೆಮ್ಮೆ ಇದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. 

2025ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 5ರವರೆಗೆ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ 100ಕ್ಕೂ ಹೆಚ್ಚು ದೇಶಗಳ 1,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಲಿದ್ದಾರೆ.