ಮಹಂತ್ ನರೇಂದ್ರ ಗಿರಿ ಅನುಮಾನಾಸ್ಪದ ಸಾವು.!

ಮಹಂತ್ ನರೇಂದ್ರ ಗಿರಿ ಅನುಮಾನಾಸ್ಪದ ಸಾವು.!

ಲಕ್ನೋ: ಅಖಿಲ ಭಾರತೀಯ ಅಖಂಡ ಪರಿಷತ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಅಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. 

 

ಮಹಂತ್ ನರೇಂದ್ರ ಗಿರಿ ಅವರ ಮೃತದೇಹವು ಸೋಮವಾರ ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿರುವ ಬಘಂಬರಿ ಮಠದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಂತ್ ನರೇಂದ್ರ ಗಿರಿ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. 

 

ಮೃತದೇಹದ ಬಳಿ ಐದು ಪುಟಗಳ ಡೆತ್​​ನೋಟ್​ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಪತ್ರದಲ್ಲಿ ತಮ್ಮ ಸಾವಿಗೆ ತಾವೇ ಕಾರಣ ಎಂದು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ನರೇಂದ್ರ ಗಿರಿ ಅವರ ಸಾವಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ದೇಶದ ಗಣ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. 

 

ನರೇಂದ್ರ ಗಿರಿ ಅವರ ಸಾವಿನ ಸುದ್ದಿ ತಿಳಿಯುತ್ತಿದಂತೆ ಐಜಿ ಕೆಪಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರದ್ದು ಕೊಲೆಯೋ? ಆತ್ಮಹತ್ಯೆಯೋ ಎಂಬ ಅನುಮಾನ ಅಪಾರ ಭಕ್ತ ಸಾಗರದಲ್ಲಿ ಎದುರಾಗಿದೆ.