ದೇಶದಲ್ಲಿ 24ಗಂಟೆಯಲ್ಲಿ 16,326 ಹೊಸ ಕೊರೊನಾ ಕೇಸ್ ಪತ್ತೆ; 666 ಮಂದಿ ಸಾವು

ನವದೆಹಲಿ : ದೇಶದಲ್ಲಿ 100 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿ ಮೈಲಿಗಲ್ಲು ನಿರ್ಮಿಸಿದೆ. ಇದರ ನಡುವೆ ಕಳೆದ 24ಗಂಟೆಯಲ್ಲಿ 16,326 ಕೊವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 666 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,41,59,562ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 4,53,708 ಕ್ಕೆ ತಲುಪಿದೆ. ದೇಶದಲ್ಲಿ ಸದ್ಯ ಕೊರೊನಾ ಸಕ್ರಿಯ ಪ್ರಕರಣಗಳು 1,73,728 ರಷ್ಟಿವೆ. ಚೇತರಿಸಿಕೊಂಡವರ ಸಂಖ್ಯೆ 3,35,32,126 ರಷ್ಟಿದೆ. ದೇಶದಲ್ಲಿ ಮೊನ್ನೆಗೆ 100 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿ ಮುಗಿದಿದೆ. ಹಾಗೇ ಕಳೆದ 24ಗಂಟೆಯಲ್ಲಿ 68,48,417 ಡೋಸ್ ಕೊವಿಡ್ 19 ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 101.3 ಕೋಟಿ ಡೋಸ್ ಕೊವಿಡ್ 19 ಲಸಿಕೆ ನೀಡಿಕೆಯಾಗಿದೆ.