ಹುಬ್ಬಳ್ಳಿ-ಮಂಗಳೂರು ನೇರ ವಿಮಾನ ಸೇವೆ ಮಾರ್ಚ್ 10ರಿಂದ ಸ್ಥಗಿತ

ಹುಬ್ಬಳ್ಳಿ/ಮಂಗಳೂರು: ಹುಬ್ಬಳ್ಳಿ-ಮಂಗಳೂರು ಮಧ್ಯೆ ಇದ್ದ ನೇರ ವಿಮಾನ ಸೇವೆ ಕಾರಣಾಂತರಗಳಿಂದ ಮಾರ್ಚ್ 10ರಿಂದ ಸ್ಥಗಿತಗೊಳ್ಳಲಿದೆ ಎಂದು ಮೂಲಗಳು ಮಾಹಿತಿ ರವಾನೆ ಮಾಡಿವೆ.
ಹೌದು. ಮಂಗಳೂರು–ಹುಬ್ಬಳ್ಳಿ ಮಧ್ಯೆ ಇದ್ದ ನೇರ ವಿಮಾನ ಸೇವೆ ಮಾರ್ಚ್ 10ರಿಂದ ಸ್ಥಗಿತಗೊಳ್ಳಲಿದ್ದು, ಕಳೆದ ವರ್ಷದ ಮೇ ತಿಂಗಳಲ್ಲಿ ಇಂಡಿಗೋ ಸಂಸ್ಥೆ ಈ ಮಾರ್ಗದಲ್ಲಿ ವಿಮಾನ ಸೇವೆ ಆರಂಭಿಸಿತ್ತು. ಆದರೆ ಈಗ ಸ್ಥಗತಿಗೊಳ್ಳಲಿದೆ. ಸೋಮವಾರ, ಬುಧವಾರ, ಶುಕ್ರವಾರ ಈ ಮಾರ್ಗದಲ್ಲಿ ನೇರ ವಿಮಾನ ಸೇವೆ ಇತ್ತು. ಸಂಜೆ 6.30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ ರಾತ್ರಿ 7.35ಕ್ಕೆ ಮಂಗಳೂರು ತಲುಪುತ್ತಿತ್ತು. ಮಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ರಾತ್ರಿ 9.05 ಹುಬ್ಬಳ್ಳಿ ತಲುಪುತ್ತಿತ್ತು.
ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಈ ಸೇವೆಯನ್ನು ಇದೇ 10ರಿಂದ ಕೊನೆಗೊಳಿಸಲಾಗುತ್ತಿದೆ.