ಕನ್ನಡದ ಹಿರಿಯ ಕಲಾವಿದ ಮೋಹನ್ ಜುನೇಜಾ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಿರಿಯ ಕಲಾವಿದ ಮೋಹನ್ ಕುಮಾರ್ ಜುನೇಜಾ ಇನ್ನಿಲ್ಲ. ಮಧುಮಗ ಮೋಹನ್ ಎಂದೇ ಖ್ಯಾತಿ ಪಡೆದಿದ್ದ ಮೋಹನ್, 200 ಚಿತ್ರಗಳಲ್ಲಿ ನಟಿಸಿ ಸಿನಿ ಪ್ರೇಮಿಗಳನ್ನ ಹಾಸ್ಯದ ಮೂಲಕವೂ ರಂಜಿಸಿದ್ದಾರೆ. ವಿಲನ್ ಪಾತ್ರದ ಮೂಲಕವೂ ಭಯಗೊಳಿಸಿದ್ದಾರೆ.
ಚೆಲ್ಲಾಟ ಸಿನಿಮಾ ಮೂಲಕವೇ ಸಾಕಷ್ಟು ಹೆಸರು ಮಾಡಿದ್ದ ಮೋಹನ್, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ನಿಧನರಾಗಿದ್ದಾರೆ. ಅವರ ಪುತ್ರ ಈ ತಂದೆಯ ಸಾವಿನ ವಿಷಯವನ್ನ ಖಚಿತಪಡಿಸಿದ್ದಾರೆ.