ಹುಬ್ಬಳ್ಳಿ : ನವನಗರ, ಸುತಗಟ್ಟಿಯಿಂದ ಚಿಗರಿ ಬಸ್ ಸಂಪರ್ಕ ಸಾರಿಗೆ ಆರಂಭ

ಹುಬ್ಬಳ್ಳಿ : ನವನಗರ, ಸುತಗಟ್ಟಿಯಿಂದ ಚಿಗರಿ ಬಸ್ ಸಂಪರ್ಕ ಸಾರಿಗೆ ಆರಂಭ

ಹುಬ್ಬಳ್ಳಿ : ನವಗರ ಹಾಗೂ ಸುತಗಟ್ಟಿ ಪ್ರಯಾಣಿಕರ ಅನುಕೂಲಕ್ಕಾಗಿ ಚಿಗರಿ ಬಸ್ ಸಂಪರ್ಕ ಸಾರಿಗೆಯನ್ನು ಆರಂಭಿಸಲಾಗಿದೆ. ನವನಗರದ ಕರ್ನಾಟಕ ಸರ್ಕಲ್ ದಿಂದ RTO ಚಿಗರಿ ಬಸ್ ಸ್ಟೇಶನ್ ವರಗೆ ಈ ಬಸ್ ಸಂಚರಿಸಲಿದೆ. ಈ ಬಸ್ಸಿನಲ್ಲಿ ಪ್ರಯಾಣಿಸುವವರು RTO ಚಿಗರಿ ಬಸ್ ಸ್ಟೇಶನ್ ಧಾರವಾಡ ಕಡೆಗೆ ಅಥವಾ ಹುಬ್ಬಳ್ಳಿ ಕಡೆಗೆ ಪ್ರಯಾಣಿಸಬಹುದಾಗಿದೆ. 

ಪ್ರಾಯೋಗಿಕವಾಗಿ ಮಾಸಿಕ ಸ್ಮಾರ್ಟ್ ಕಾರ್ಡ ಪಾಸ್ ಹೊಂದಿದವರು ಈ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈಚೆಗೆ ನವನಗರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಅರವಿಂದ ಬೆಲ್ಲದ್ ಅವರು ಸಂಪರ್ಕ ಸಾರಿಗೆಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಕಾರ್ಪೋರೇಟರುಗಳಾದ ಸುನಿತಾ ಮಾಳ್ವದೇಕರ್, ಚಂದ್ರಶೇಖರ್ ಮನಗುಂಡಿ ಪೂಜೆ ನೆರವೇರಿಸಿದರು. ಪ್ರಯಾಣಿಕರು ಈ ಸೌಲಭ್ಯದ ಪ್ರಯೋಜನ ಪಡೆಯಲು ಕೋರಲಾಗಿದೆ.