IPL 2024 | ಆರ್‌ಸಿಬಿ ಪ್ರಕರ ಬೌಲಿಂಗ್ - 147 ರನ್‌ಗಳಿಗೆ ಗುಜರಾತ್ ಆಲೌಟ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಕರ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟಾನ್ಸ್ 147 ರನ್‌ಗಳಿಗೆ ಆಲೌಟ್ ಆಗಿದೆ.
ಐಪಿಎಲ್ 2024ರ ಟೂರ್ನಿಯ ಭಾಗವಾಗಿ ಇಂದು ನಡೆಯುತ್ತಿರುವ 52ನೇ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು 19.3 ಓವರ್‌ಗಳಲ್ಲಿ ಆಲೌಟ್‌ಗೆ ತುತ್ತಾಗಿ 147 ರನ್ ಗಳಿಸಿದೆ. ತಂಡದ ಪರ ಎಂ ಶಾರುಖ್ ಖಾನ್ 37 ರನ್, ಡೇವಿಡ್ ಮಿಲ್ಲರ್ 30 ರನ್ ಹಾಗೂ ರಾಹುಲ್ ತೆವಾಟಿಯಾ 35 ರನ್ ಗಳಿಸಿದರು.
ಇನ್ನು ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಹಾಗೂ ವಿಜಯ್ ಕುಮಾರ್ ವೈಶಾಕ್ ತಲಾ 2 ವಿಕೆಟ್ ಉರುಳಿಸಿದರೆ, ಕರ್ಣ್ ಶರ್ಮಾ ಹಾಗೂ ಕ್ಯಾಮೆರಾನ್ ಗ್ರೀನ್ ತಲಾ 1 ವಿಕೆಟ್ ಪಡೆದುಕೊಂಡರು.