IPL 2024 | RR vs DC: ಸಿಕ್ಸರ್, ಬೌಂಡರಿ ಮಳೆ ಸುರಿಸಿದ ಪರಾಗ್ - ಡೆಲ್ಲಿಗೆ 186 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ್

IPL 2024 | RR vs DC: ಸಿಕ್ಸರ್, ಬೌಂಡರಿ ಮಳೆ ಸುರಿಸಿದ ಪರಾಗ್ - ಡೆಲ್ಲಿಗೆ 186 ರನ್ ಟಾರ್ಗೆಟ್ ನೀಡಿದ ರಾಜಸ್ಥಾನ್

ಜೈಪುರ: ರಿಯಾನ್ ಪರಾಗ್ ಅಬ್ಬರದ ಅರ್ಧಶತಕದ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 186 ರನ್‌ಗಳ ಗುರಿ ನೀಡಿದೆ. 

ರಾಜಸ್ಥಾನದ ರಾಜಧಾನಿ ಜೈಪುರದ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 17ನೇ ಆವೃತ್ತಿಯ 9ನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ರಿಷಬ್ ಪಂತ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ. ತಂಡದ ಪರ ರಿಯಾನ್ ಪರಾಗ್ 45 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸ್ ಸೇರಿ 84 ರನ್ ಗಳಿಸಿದರು.