ಆರ್‌ಸಿಬಿ ಹೆಡ್ ಕೋಚ್ ಆಗಿ ಸಂಜಯ್ ಬಂಗಾರ್ ಆಯ್ಕೆ

ಆರ್‌ಸಿಬಿ ಹೆಡ್ ಕೋಚ್ ಆಗಿ ಸಂಜಯ್ ಬಂಗಾರ್ ಆಯ್ಕೆ

ಬೆಂಗಳೂರು:ಐಪಿಎಲ್ ಪಂದ್ಯಗಳ ಭರಾಟೆ ಇನ್ನೇನು ಶುರು ಆಗುತ್ತದೆ. ತಂಡಗಳ ಹರಾಜು ಪ್ರಕಿಯೆನೂ ಆರಂಭಗೊಳ್ಳುತ್ತದೆ.ಅದಕ್ಕೂ ಮೊದಲೇ ಆರ್‌ಸಿಬಿ ತಂಡದ ಫ್ರಾಚಾಯ್ಸಿಗಳು ಈಗಲೇ ತಮ್ಮ ತಂಡದ ಮುಖ್ಯ ಕೋಚ್ ಹೆಸರನ್ನ ಅನೌನ್ಸ್ ಮಾಡಿದೆ. ಅದುವೇ ಸಂಜಯ್ ಬಂಗಾರ್. ಸಂಜಯ್ ಬಂಗಾರ್ ಈ ಹಿಂದೆ ಇದೇ ಆರ್‌ಸಿಬಿ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ನೇಮಕೊಂಡಿದ್ದಿರು. ಈ ವರ್ಷ ಇಡೀ ಆರ್‌ಸಿಬಿ ತಂಡಕ್ಕೆ ಹೆಡ್ ಕೋಚ್ ಆಗಿದ್ದಾರೆ. ಮುಂದಿನ (2022 ರಿಂದ 2023 )ಎರಡು ವರ್ಷ ಹೆಡ್ ಕೋಚ್ ಆಗಿಯೇ ಸಂಜಯ್ ಬಂಗಾರ್ ಕೆಲಸ ಮಾಡಲಿದ್ದಾರೆ. ಆರ್‌ಸಿಬಿ ತಂಡದ ನಾಯಕ ಯಾರೂ ಅನ್ನೋದು ಇನ್ನೂ ಫೈನಲ್ ಆಗಿಯೇ ಇಲ್ಲ. ಅದಕ್ಕೂ ಮುಂಚೆ ಸಂಜಯ್ ಆಯ್ಕೆ ಆಗಿದೆ. ಈ ಬಗ್ಗೆ ತುಂಬಾ ಸಂತೋಷದಲ್ಲಿಯೆ ಇರೋ ಸಂಜಯ್ ಬಂಗಾರ್,ತಂಡವನ್ನ ಅತ್ಯುತ್ತಮವಾಗಿಯೇ ಮುನ್ನಡೆಸಲು ಉತ್ಸುಕನಾಗಿದ್ದೇನೆ ಅಂತಲೇ ಹೇಳಿಕೊಂಡಿದ್ದಾರೆ.