ಹಾಸನ: ನಾಳೆ ಹಾಸನಾಂಬೆ ಗರ್ಭಗುಡಿ ಕ್ಲೋಸ್: ದರ್ಶನಕ್ಕೆ ಬಂದ ಭಕ್ತಸಾಗರ

ಹಾಸನ: ನಾಳೆ ಹಾಸನಾಂಬೆ ಗರ್ಭಗುಡಿ ಕ್ಲೋಸ್: ದರ್ಶನಕ್ಕೆ ಬಂದ ಭಕ್ತಸಾಗರ

ಹಾಸನ: ನಾಳೆ ಶನಿವಾರ ಹಾಸನಾಂಬೆ ದೇಗುಲದ ಗರ್ಭಗುಡಿ ಮುಚ್ಚಲಾಗುತ್ತಿದೆ. ಹೀಗಾಗಿ ಇಂದು ದೇವಿ ದರ್ಶನ ಪಡೆಯಲು ಇಂದು ಬೆಳಗಿನಿಂದಲೇ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಕಳೆದ ಎಂಟು ದಿನಗಳಲ್ಲಿ ಲಕ್ಷಾಂತರ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದಾರೆ. ನಾಳೆ ದೇವಸ್ಥಾನದ ಗರ್ಭಗುಡಿ ಮುಚ್ಚಲಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಸನಾಂಬೆ ದರ್ಶನ ಮಾಡುತ್ತಿದ್ದಾರೆ. ಇಂದು ರಾತ್ರಿವರೆಗೂ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.