ಸಂತೋಷ್ ಆತ್ಮಹತ್ಯೆಯಲ್ಲಿ ಮಹಾನ್ ನಾಯಕನ ಕೈವಾಡವಿದೆ : ಹೊಸ ಬಾಂಬ್ ಸಿಡಿಸಿದ ಸಾಹುಕಾರ

ಬೆಳಗಾವಿ : ಸಚಿವ ಈಶ್ವರಪ್ಪನವರನ್ನು ಹೊಣೆಗಾರನ್ನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಮೃತ ಸಂತೋಷ್ ಕೇಸ್ ಗೆ ಸದ್ಯ ಮೆಗಾ ಟ್ವೀಸ್ಟ್ ಸಿಕ್ಕಿದೆ. ಮೃತ ಸಂತೋಷ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಈಶ್ವರಪ್ಪ ರಾಜೀನಾಮೆ ನೀಡಬಾರದು ನನ್ನ ಸಿಡಿ ತಯಾರಿಸಿದ್ದ ಮಹಾನ್ ನಾಯಕರೇ ಸಂತೋಷ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆತ್ಮ ಹತ್ಯೆ ಪ್ರಕರಣವನ್ನು ಸಿಬಿಐ ಗೆ ವಹಿಸಿ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.