ವಿಪಕ್ಷಗಳ ಒಕ್ಕೂಟಕ್ಕೆ “ಜೀತೇಗ ಭಾರತ್

ನವದೆಹಲಿ: ದಶದ 26 ವಿಪಕ್ಷಗಳು ಒಗ್ಗಟ್ಟಾಗಿ ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಸಭೆ ಸೇರಿದ್ದವು ಈ ಒಕ್ಕೂಟಕ್ಕೆ INDIA (Indian National Developmental Inclusive Alliance) ಎಂದು ಹೆಸರಿಸಲಾಗಿದೆ ಹಾಗೂ ಈ ಹೆಸರಿಗೆ ಈಗ “ಜೀತೇಗಾ ಭಾರತ್” ಎಂದು ಟ್ಯಾಗ್ ಲೈನ್ ಅಂತಿಮಗೊಳಿಸಲಾಗಿದೆ.
2024ರ ಲೋಕಸಭಾ ಚುನಾವಣೆಗೆ ನಿನ್ನೆ ಬೆಂಗಳೂರಿನಿಂದ ರಣಕಹಳೆ ಊದಿರುವ "ಇಂಡಿಯಾ" ಒಕ್ಕೂಟ, ಎನ್ಡಿಎ ಮೈತ್ರಿಕೂಟವನ್ನು ಮಣಿಸುವುದೇ ಅದರ ಉದ್ದೇಶವಾಗಿದೆ.
ಜುಲೈ 17 ರಿಂದ ಆರಂಭವಾದ ಎರಡು ದಿನಗಳ ಮಹಾಸಭೆಯಲ್ಲಿ I.N.D.I.A ಹೆಸರನ್ನು ಅಂತಿಮಗೊಳಿಸಿದೆ. ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆ ಮೋದಿ ಹಾಗೂ ಇಂಡಿಯಾ ನಡುವಿನ ಯುದ್ಧ. ಈ ಸಮರ ಎನ್ಡಿಎ ಮತ್ತು ಇಂಡಿಯಾ, ನರೇಂದ್ರ ಮೋದಿ ಮತ್ತು ಇಂಡಿಯಾ, ಮೋದಿ ಸಿದ್ಧಾಂತ ಮತ್ತು ಇಂಡಿಯಾ ನಡುವಿನ ಹೋರಾಟವಾಗಿದೆ. ಎಲ್ಲ ಯುದ್ಧಗಳಲ್ಲೂ ಭಾರತ ಯಾವಾಗಲೂ ಗೆಲುವು ಸಾಧಿಸಿದೆ ಎಂದಿದ್ದಾರೆ.