ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11ಮಂದಿ ಅಭ್ಯರ್ಥಿಗಳು ಅವಿರೋಧ ಆಯ್ಕೆ!

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ ಹನ್ನೊಂದು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ- ಜೆಡಿಎಸ್ ಮಿತ್ರ ಪಕ್ಷ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಆಯಾ ಪಕ್ಷಗಳ ವಿಧಾನಸಭೆ ಸದಸ್ಯರ ಒಟ್ಟು ಸಂಖ್ಯಾ ಬಲದ ಮೇಲೆ ಕಾಂಗ್ರೆಸ್‌ನಿಂದ ಏಳು, ಬಿಜೆಪಿಯಿಂದ ಮೂವರು ಹಾಗೂ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಓರ್ವ ಅಭ್ಯರ್ಥಿ ಸೇರಿದಂತೆ ಒಟ್ಟು ಹನ್ನೊಂದು ಸ್ಥಾನಗಳ ಹನ್ನೊಂದು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಹನ್ನೊಂದು ಸ್ಥಾನಗಳಿಗೆ 12 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಆದರೆ, ಕಾಂಗ್ರೆಸ್ ನ ಆಸೀಫ್ ಪಾಷಾ ಎಂಬುವರ ನಾಮಪತ್ರ ಸೂಚಕರ ಸಹಿ ಇಲ್ಲದ ಕಾರಷ ತಿರಸ್ಕೃತವಾದ ಪರಿಣಾಮ ಕೊನೆಗೆ ಹನ್ನೊಂದು ಸ್ಥಾನಗಳಿಗೆ ಹನ್ನೊಂದು ಮಂದಿ ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದುರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಗೊಂಡರೆಂದು ಮೂಲಗಳು ತಿಳಿಸಿವೆ.
ಯಾರೆಲ್ಲ ಆಯ್ಕೆ?
ಡಾ.ಯತೀಂದ್ರ ಸಿದ್ದರಾಮಯ್ಯ
ಎನ್.ಎಸ್.ಬೋಸರಾಜ್
ಕೆ.ಗೋವಿಂದರಾಜು
ವಸಂತಕುಮಾರ್
ಐವಾನ್ ಡಿಸೋಜ
ಬಲ್ಕಿಸ್ ಬಾನು
ಜಗದೇವ್ ಗುತ್ತಿಗೆದಾರ
ಇವರೆಲ್ಲ ಕಾಂಗ್ರೆಸ್ ಪಕ್ಷದಿಂದ ಮೇಲ್ಮನೆಗೆ ಆಯ್ಕೆಗೊಂಡರೆ, ಇನ್ನು ಬಿಜೆಪಿ ಮತ್ತು ಜೆಡಿಎಸ್ ನಿಂದ ಆಯ್ಕೆಗೊಂಡವರ ಹೆಸರುಗಳು ಹೀಗಿವೆ.
ಸಿ.ಟಿ.ರವಿ
ಎನ್.ರವಿಕುಮಾರ್
ಎಂ.ಜಿ.ಮೂಳೆ
ಜೆಡಿಎಸ್‌ನಿಂದ ಜವರಾಯಗೌಡ.