ಹುಬ್ಬಳ್ಳಿ: ಅದಿರು ಸಾಗಾಣಿಕೆಗೆ ಜಿಂದಾಲ್ ಜೊತೆ ನೈರುತ್ಯ ರೈಲ್ವೆ ಒಪ್ಪಂದ...!

ಹುಬ್ಬಳ್ಳಿ: ಅದಿರು ಸಾಗಾಣಿಕೆಗೆ ಜಿಂದಾಲ್ ಜೊತೆ ನೈರುತ್ಯ ರೈಲ್ವೆ ಒಪ್ಪಂದ...!

ಹುಬ್ಬಳ್ಳಿ: ಹೆಚ್ಚುವರಿ ಕಬ್ಬಿಣ ಅದಿರು ಸಾಗಣೆ ಕುರಿತಾಗಿ ಬಳ್ಳಾರಿ ಜಿಲ್ಲೆ ತೋರಣಗಲ್ಲ ಜಿಂದಾಲ್ ಮಿನರಲ್ಸ್ ರೇಲ್ ಲಾಜಿಸ್ಟಿಕ್ ಸಂಸ್ಥೆಯು ನೈರುತ್ಯ ರೈಲ್ವೆ ಜತೆ ಒಪ್ಪಂದ ಮಾಡಿಕೊಂಡಿದೆ. 

ಹೌದು.. ಕಳೆದ ಅಕ್ಟೋಬರ್ 17ರಂದು 7 ರೇಕ್‌ಗಳ ಅದಿರು ಸಾಗಣೆ ಸಂಬಂಧಿಸಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಪೂರಕವಾಗಿ ಮತ್ತೆ ಹೆಚ್ಚುವರಿಯಾಗಿ 5 ರೇಕ್‌ಗಳ ಅದಿರು ಸಾಗಿಸಲು ಜಿಂದಾಲ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಪ್ರತಿ ರೇಕ್‌ಗೆ 29.57 ಕೋಟಿ ರೂ. ನಿಗದಿಪಡಿಸಿದ್ದು, ಇದಕ್ಕೆ ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. 

ನೈರುತ್ಯ ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಎ.ಸುಂದರ ಹಾಗೂ ಜಿಂದಾಲ್ ಸಂಸ್ಥೆಯ ಸುಶೀಲ ನೋವಾಲ್ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಿದ್ದಾರೆ.