ಬ್ರೇಕಿಂಗ್: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರ ಕುಮಾರ ಡಿಸ್ಸಾನಾಯಕೆ ಆಯ್ಕೆ

ಕೊಲಂಬೊ: ಶ್ರೀಲಂಕಾದ ಎಡಪಂಥೀಯ (ರಾಷ್ಟ್ರೀಯ ಜನತಾ ಶಕ್ತಿ) ನಾಯಕ ಅನುರಾ ಕುಮಾರ ಡಿಸ್ಸಾನಾಯಕೆ ಅವರು ಇಂದು (ಭಾನುವಾರ) ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಅನುರಾ ಕುಮಾರ ಡಿಸ್ಸಾನಾಯಕೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಮೊದಲ ಸುತ್ತಿನಲ್ಲೇ ಮತಪಟ್ಟಿಯಲ್ಲಿ ಮೊದಲೆರಡರೊಳಗೆ ಬರಲು ವಿಫಲರಾಗಿದ್ದರಿಂದ ಹೊರಬಿದ್ದಿದ್ದರು.
ಶ್ರೀಲಂಕಾದ ಜನತೆ ತಮ್ಮ 10ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಶನಿವಾರ ತಮ್ಮ ಮತ ಚಲಾಯಿಸಿದ್ದರು. ಗೆಲುವಿನ ಬಳಿಕ ಅನುರಾ ಕುಮಾರ ಡಿಸ್ಸಾನಾಯಕೆ ಅವರು, 'ನಾವು ಕೈಜೋಡಿಸೋಣ, ಭವಿಷ್ಯವನ್ನು ರೂಪಿಸೋಣ' ಎಂದು ಶ್ರೀಲಂಕಾ ಪ್ರಜೆಗಳಿಗೆ ಕರೆ ನೀಡಿದ್ದಾರೆ.