ಮಧ್ಯಾಹ್ನ 12.30ರ ವೇಳೆಗೆ 400ಕ್ಕಿಂತ ಹೆಚ್ಚು ಸೀಟ್ ಗೆದ್ದಿರುತ್ತೇವೆ-ಅಮಿತ್ ಶಾ ವಿಶ್ವಾಸ

ಮಧ್ಯಾಹ್ನ 12.30ರ ವೇಳೆಗೆ 400ಕ್ಕಿಂತ ಹೆಚ್ಚು ಸೀಟ್ ಗೆದ್ದಿರುತ್ತೇವೆ-ಅಮಿತ್ ಶಾ ವಿಶ್ವಾಸ

ನವದೆಹಲಿ: ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶದ ದಿನ ಮಧ್ಯಾಹ್ನ 12.30ರ ವೇಳೆಗೆ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನದ ಗುರಿ ತಲುಪಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಶಾ, ‘ನಮ್ಮ ಪಕ್ಷದ ತಂಡ ಮತ್ತು ನಾನು ವಿಸ್ರೃತವಾದ ಅಧ್ಯಯನ ನಡೆಸಿದ್ದೇವೆ. ನಮ್ಮ ಲೆಕ್ಕಾಚಾರದ ಪ್ರಕಾರ ಮೊದಲ ಎರಡು ಹಂತದಲ್ಲಿ ನಾವು 100ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಮತ್ತು ಮೂರನೇ ಹಂತದ ಚುನಾವಣೆಯಲ್ಲೂ ಅದೇ ವಿಶ್ವಾಸದತ್ತ ಸಾಗುತ್ತಿದ್ದೇವೆ. ಫಲಿತಾಂಶದ ದಿನ ಬಿಜೆಪಿ 370 ಮತ್ತು ಒಟ್ಟಾರೆ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.