ಡಿ.13ರಂದು ವಾರಣಾಸಿಯ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಲಿದ್ದಾರೆ ಮೋದಿ

ಡಿ.13ರಂದು ವಾರಣಾಸಿಯ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಲಿದ್ದಾರೆ ಮೋದಿ

ವಾರಣಾಸಿ(ಉತ್ತರ ಪ್ರದೇಶ): ವಾರಣಾಸಿಯ ಕಾಶಿ ವಿಶ್ವನಾಥ ಕಾರಿಡಾರ್ಅನ್ನು ಪ್ರಧಾನಿ ಮೋದಿ ಡಿಸೆಂಬರ್ 13ರಂದು ಉದ್ಘಾಟಿಸಲಿದ್ದಾರೆ. ಇದು ಸರಿಸುಮಾರು 800 ಕೋಟಿ ವೆಚ್ಚದ್ದಾಗಿದೆ. ಬಹುಕೋಟಿ ಕಾರಿಡಾರ್ ಯೋಜನೆಯನ್ನು ಉದ್ದೇಶಿತ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಹಿಂದಿನ ವಾಸ್ತುಶಿಲ್ಪಿ ಭೀಮಲ್ ಪಟೇಲ್ ವಿನ್ಯಾಸಗೊಳಿಸಿದ್ದರು. ಪ್ರಧಾನಮಂತ್ರಿ ಮೋದಿಯ ಕನಸಿನ ಯೋಜನೆ ಎಂದು ಕರೆಯಲ್ಪಡುವ ಈ ಕಾರಿಡಾರ್ ದೇವಾಲಯ ಮತ್ತು ಗಂಗಾ ನದಿಯ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸುತ್ತದೆ. ಎರಡು ದಿನಗಳ ಕಾಲ ವಾರಾಣಸಿಯಲ್ಲಿ ಬಿಜೆಪಿಯು ತನ್ನ ಶಕ್ತಿ ಪ್ರದರ್ಶನವನ್ನು ಮಾಡಲಿದ್ದು, ಎರಡು ದಿನಗಳ ಕಾಲ ಬಿಜೆಪಿ ಆಳ್ವಿಕೆಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಾರಾಣಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಉದ್ಘಾಟನೆ ಹಾಗೂ ಉಳಿದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.