ಬಜೆಟ್ ಅಧಿವೇಶನ ಆರಂಭ | ನೂತನ ಸಂಸತ್ನಲ್ಲಿ ಮೊದಲ ಭಾಷಣಗೈದ ರಾಷ್ಟ್ರಪತಿ ದ್ರೌಪದಿ ಮುರ್ಮು

2024ರ ಲೋಕಸಭಾ ಚುನಾವಣೆಗೆ ಹತ್ತಿರವಾಗುತ್ತಿರುವಂತೆಯೇ ಸಂಸತ್ನ ಬಜೆಟ್ ಅಧಿವೇಶನವು ಬುಧವಾರ ಆರಂಭಗೊಂಡಿದೆ. 17ನೇ ಲೋಕಸಭೆಯ ಅಂತಿಮ ಅಧಿವೇಶನ ಇದಾಗಿದೆ.
ಸಂಸತ್ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಬುಧವಾರ ಭಾಷಣಗೈಯ್ಯುವ ಮೂಲಕ ರಾಷ್ಟ್ರಪತಿ ದೌಪದಿ ಮುರ್ಮು, ನೂತನ ಸಂಸತ್ ಭವನ ‘ಸೆಂಟ್ರಲ್ ವಿಸ್ಟಾ’ದಲ್ಲಿ ಇದೇ ಮೊದಲ ಸಲ ಮಾತನಾಡಿದ್ದಾರೆ. ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಸರ್ಕಾರವು ಆಹ್ವಾನಿಸಿರಲಿಲ್ಲ. ಇದು ದೇಶಾದ್ಯಂತ ವಿವಾದಕ್ಕೂ ಕಾರಣವಾಗಿತ್ತು.
ಉದ್ಘಾಟನೆಯ ಸಂದರ್ಭದಲ್ಲಿ ಬಳಸಲಾಗಿದ್ದ ‘ಸೆಂಗೋಲ್’ ಅನ್ನು ಕೂಡ ಇದೇ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ಪೀಠದ ಮುಂದೆ ತಂದು ಇಡಲಾಯಿತು. ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಯೋಜನೆ, ಸಾಧನೆ ಹಾಗೂ ದೇಶದ ಆರ್ಥಿಕತೆಯ ವಿವರಗಳನ್ನು ಓದಿದರು.