ದಾಂಡೇಲಿ: ಕಾಳಿ ನದಿಯಲ್ಲಿ ಒಂದೇ ಕುಟುಂಬದ 6 ಜನರ ಸಾವು-ಮೃತರೆಲ್ಲರೂ ಹುಬ್ಬಳ್ಳಿಯವರು

ಹುಬ್ಬಳ್ಳಿ/ದಾಂಡೇಲಿ: ದಾಂಡೇಲಿಗೆ ಪ್ರವಾಸಕ್ಕೆಂದು ಹೋಗಿದ್ದ ಒಂದೇ ಕುಟುಂಬದ ಆರು ಜನರು ಕಾಳಿ ನದಿಯಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಕಾಳಿ ನದಿಯಲಿ ಘಟನೆ ನಡೆದಿದ್ದು, ಹುಬ್ಬಳ್ಳಿಯ ಈಶ್ವರ ನಗರದ ಒಂದೇ ಕುಟುಂಬದ ಆರು ಜನರ ಸಾವನಪ್ಪಿದ್ದಾರೆ. ನಜೀರ್ ಅಹ್ಮದ್ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್ (6), ರೇಷ್ಮಾ ಉನ್ನಿಸಾ (38) ಇಫ್ರಾ ಅಹ್ಮದ್ (15), ಆಬೀದ್ ಅಹ್ಮದ್ (12) ಮೃತಪಟ್ಟವರು. ಪ್ರವಾಸಕ್ಕೆಂದು ಅಕ್ವಾಡಕ್ಕೆ ಹೋಗಿದ್ದ ಎಂಟು ಜನ ಈಜಲು ನದಿಗೆ ಇಳಿದಿದ್ದಾರೆ.
ಇದರಲ್ಲಿ ಆರು ಜನರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.
ನೀರಿಗಿಳಿಯದ ಇಬ್ಬರು ಮಹಿಳೆಯರ ಪೈಕಿ ಓರ್ವರ ಪತಿ ಹಾಗೂ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ದಾಂಡೇಲಿ ಆಸ್ಪತ್ರೆಗೆ ರವಾನಿಸಲಾಗಿದೆ. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.