ವಿದ್ಯುತ್ ಬಳಿಕ ನೀರಿನಲ್ಲೂ ಶಾಕ್ ಕೊಟ್ಟ ಸರಕಾರ- ನೀರಿನ ಬಿಲ್ ಏರಿಕೆ
ಬೆಂಗಳೂರು: ಆ ಕಡೆ ಕೊಟ್ಟು ಈ ಕಡೆ ಕಸಿದುಕೊಳ್ಳೋದು ಅಂತಾರಲ್ಲ..ಅದು ಇದೇ ಇರುಬೇಕು. ವಿದ್ಯುತ್ ಬಿಲ್ ಏರಿಕೆ ಹೊರೆಯನ್ನು ನೇರವಾಗಿ ಸಾಮಾನ್ಯ ಗ್ರಾಹಕರ ಮೇಲೆ ಹಾಕಿದ್ದ ರಾಜ್ಯ ಸರಕಾರ ಈಗ ನೀರಿನ ಬಿಲ್ ಹೆಚ್ಚಳ ಮಾಡಲು ಮುಂದಾಗಿದೆ.
ಬೆಂಗಳೂರಿನ ಕೆಲವು ಮನೆಗಳಲ್ಲಿ ಏಕಾಏಕಿ ಮನೆಯ ನೀರಿನ ಬಳಕೆಯ ಬಿಲ್ ಡಬಲ್, ತ್ರಿಬಲ್ ಆಗಿದೆ. ಹೀಗೆ ಹಲವು ರೀತಿಯಲ್ಲಿ ಬೆಲೆ ಏರಿಕೆ ಬಾಣ ಜನರಿಗೆ ಚುಚ್ಚುತ್ತಿದೆ. ಸರ್ಕಾರ ಒಂದು ಕೈನಲ್ಲಿ ಕೊಟ್ಟು ಮತ್ತೊಂದು ಕೈನಲ್ಲಿ ಕಿತ್ತುಕೊಳ್ತಿದೆಯಾ ಅನ್ನೋ ಆರೋಪ ಕೂಡಾ ಸಾರ್ವಜನಿಕರಿಂದ ಕೇಳಿ ಬರ್ತಿದೆ.
ಏಕಾಏಕಿ ನೀರಿನ ಶುಲ್ಕ ಹೆಚ್ಚಳ ಆಗಿದೆ. ಇದರಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದಾರೆ. ಕಳೆದ ತಿಂಗಳು 930 ರೂ. ಬಂದಿತ್ತು, ಈ ತಿಂಗಳು ಏಕಾಏಕಿ 3,000 ದಾಟಿದೆ. ವಯಾಲಿಕಾವಲ್ ಬಳಿ ಒಂದೇ ರಸ್ತೆಯ ಹತ್ತಾರು ಮನೆಗಳಲ್ಲಿ ನೀರಿನ ಬಿಲ್ ಡಬಲ್ ಆಗಿರೋದು ನೋಡಿ ಜನ ಶಾಕ್ ಆಗಿದ್ದಾರೆ. ಉಚಿತ ಭಾಗ್ಯ ಅಂತ ಈ ರೀತಿ ಮಾಡಿದ್ದಾರೆ ಎಂದು ಜಲಮಂಡಳಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾ
ರೆ.