380 ಸಾವಿರ ಕೋಟಿ ಮೊತ್ತವನ್ನು ದಾನ ಮಾಡಿದ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ವಾರನ್‌ ಬಫೆಟ್‌!

380 ಸಾವಿರ ಕೋಟಿ ಮೊತ್ತವನ್ನು ದಾನ ಮಾಡಿದ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ವಾರನ್‌ ಬಫೆಟ್‌!

ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ, ಪ್ರಖ್ಯಾತ ಹೂಡಿಕೆದಾರ ವಾರನ್‌ ಬಫೆಟ್‌ ತಮ್ಮ ಹೂಡಿಕೆ ಕಂಪನಿಯಾದ ಬರ್ಕ್‌ಷೈರ್ ಹಾಥ್‌ವೇಯ 4.64 ಶತಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ಷೇರುಗಳನ್ನು ದೇಣಿಗೆ ನೀಡಿದ್ದಾರೆ. ಬಿಲ್‌ ಹಾಗೂ ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ ಸೇರಿದಂತೆ ವಿಶ್ವದ ಐದು ಪ್ರಮುಖ ದತ್ತಿ ಸಂಸ್ಥೆಗಳು ಇದರ ಲಾಭ ಪಡೆದುಕೊಂಡಿವೆ. 

 

ವಾರನ್‌ ಬಫೆಟ್‌ ತಮ್ಮ ಕಂಪನಿಯ ಒಟ್ಟು ಶೇರುಗಳ ಪೈಕಿ ಶೇ 51ರಷ್ಟನ್ನು ದಾನ ಮಾಡಿದಂತಾಗಿದೆ. ಈ ದೇಣಿಗೆಯು ಬಫೆಟ್ ಹೂಡಿಕೆಯ ಸಂಸ್ಥೆಯಾದ ಬರ್ಕ್‌ಷೈರ್ ಹಾಥ್‌ವೇಯಿಂದ ಅದರ ಷೇರುಗಳ ವಾರ್ಷಿಕ ವಿಲೇವಾರಿ ಭಾಗವಾಗಿದೆ. ಇದು ಬರ್ಕ್‌ಷೈರ್‌ನ ಬಿ ವರ್ಗದ ಸುಮಾರು 13.7 ಮಿಲಿಯನ್ ಷೇರುಗಳನ್ನು ಒಳಗೊಂಡಿರುವ ಅವರ ಅತಿ ದೊಡ್ಡ ವಾರ್ಷಿಕ ದೇಣಿಗೆಯಾಗಿದೆ. 

 

92 ವರ್ಷದ ವಾರೆನ್ ಬಫೆಟ್ ವಿಶ್ವದ ಅತ್ಯಂತ ಪ್ರಸಿದ್ಧ ಹೂಡಿಕೆದಾರರು. ಷೇರು ಮಾರುಕಟ್ಟೆಯಲ್ಲಿ ತಮ್ಮ ಕೌಶಲ ಹಾಗೂ ಅವಕಾಶಗಳನ್ನು ಆದಾಯವನ್ನಾಗಿ ಮಾಡಿಕೊಳ್ಳಬಲ್ಲ ತಮ್ಮ ಚಾಣಾಕ್ಷತೆಗೆ ಹೆಸರುವಾಸಿಯಾಗಿದೆ. ಅವರ ಸಂಸ್ಥೆ ಬರ್ಕ್‌ಷೈರ್ ಹಾಥ್‌ವೇ, ಅಮೆರಿಕದ ಹಾಗೂ ಜಗತ್ತಿನ ಮಹಾನ್‌ ಕಂಪನಿಗಳಿಂದ ಹಿಡಿದು ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಕಂಪನಿಯಾಗಿ ಬೆಳೆಯಬಲ್ಲ ಕಂಪನಿಗಳ ಷೇರುಗಳನ್ನು ಹೊಂದಿದೆ. 

 

ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ವಾರನ್‌ ಬಫೆಟ್‌ ಸದ್ಯ ಆರನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್‌ ಮ್ಯಾಗಝೀನ್‌ ವರದಿಯ ಪ್ರಕಾರ ಇವರ ಒಟ್ಟು ಮೌಲ್ಯ 117.3 ಬಿಲಿಯನ್‌ ಅಮೇರಿಕನ್‌ ಡಾಲರ್‌. ಕೊಕಾಕೋಲಾ, ಆಪಲ್‌, ಪೆಪ್ಸಿ ಸೇರಿದಂತೆ ಬಹುತೇಕ ದೊಡ್ಡ ಕಂಪನಿಗಳಲ್ಲಿ ಪಾಲು ಹೊಂದಿರುವ ಹೂಡಿಕೆ ಸಂಸ್ಥೆ ಬರ್ಕ್‌ವೇ ಹ್ಯಾಥ್‌ವೇಯ ಚೇರ್ಮನ್‌ ಆಗಿದ್ದಾರೆ. ಹೂಡಿಕೆ ಕೌಶಲ್ಯದಿಂದಾಗಿ ಅವರು 'ಒರಾಕಲ್ ಆಫ್ ಒಮಾಹಾ' ಎಂದೇ ಜನಪ್ರಿಯರಾಗಿದ್ದಾರೆ. 

ಸಂಪತ್ತಿನ 99% ಕ್ಕಿಂತ ಹೆಚ್ಚಿನ ಹಣವನ್ನು ದಾನ ಮಾಡುವುದಾಗಿ ವಾರನ್‌ ಬಫೆಟ್‌ ಈಗಾಗಲೇ ಹೇಳಿದ್ದರು. ಆ ಭರವಸೆಯನ್ನು ಪೂರೈಸುವ ಸಲುವಾಗಿ, ಅವರು ಇಲ್ಲಿಯವರೆಗೆ ಸುಮಾರು $51 ಶತಕೋಟಿ ಮೌಲ್ಯದ ಷೇರುಗಳನ್ನು ಹೆಚ್ಚಾಗಿ ಗೇಟ್ಸ್ ಫೌಂಡೇಶನ್ ಮತ್ತು ಅವರ ಮಕ್ಕಳ ಫೌಂಡೇಶನ್‌ಗೆ ದಾನ ಮಾಡಿದ್ದಾರೆ. ಅಚ್ಚರಿಯ ವಿಚಾರವೆಂದರೆ, ತಮ್ಮ 51 ವರ್ಷಗಳ ನಂತರ ವಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹೆಚ್ಚಿನ ಸಂಪತ್ತನ್ನು ಗಳಿಸಿದ್ದರು.