ಬಿಎಸ್‌ವೈಗೆ ರಾಷ್ಟ್ರಮಟ್ಟದಲ್ಲಿ 2 ಜವಾಬ್ದಾರಿ; ಬಿಜೆಪಿಯ ಟಾಪ್ 11 ನಾಯಕರಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ

ಬಿಎಸ್‌ವೈಗೆ ರಾಷ್ಟ್ರಮಟ್ಟದಲ್ಲಿ 2 ಜವಾಬ್ದಾರಿ; ಬಿಜೆಪಿಯ ಟಾಪ್ 11 ನಾಯಕರಲ್ಲಿ ಇಬ್ಬರು ಕನ್ನಡಿಗರಿಗೆ ಸ್ಥಾನ

ನವದೆಹಲಿ: ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ರಾಷ್ಟ್ರಮಟ್ಟದಲ್ಲಿ ಎರಡು ಜವಾಬ್ದಾರಿ ನೀಡಲಾಗಿದೆ. 

ಹೌದು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಸಂಸದೀಯ ಮಂಡಳಿಯನ್ನ ಪುನರ್​ರಚಿಸಿದ್ದಾರೆ. ಟಾಪ್ 11 ನಾಯಕರ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು (ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ಎಲ್​ ಸಂತೋಷ್) ಸ್ಥಾನ ಪಡೆದಿದ್ದು ಗಮನಾರ್ಹವಾಗಿದೆ. ಈ ಬಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಶಿವರಾಜ್ ಸಿಂಗ್ ಚೌಹಣ ಅವರನ್ನ ಕೈಬಿಡಲಾಗಿದೆ. 

ಇನ್ನು ಬಿಜೆಪಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸದಸ್ಯರ ಪಟ್ಟಿಯಲ್ಲೂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸ್ಥಾನ ನೀಡಲಾಗಿದೆ. 

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಯಾರಿದ್ದಾರೆ?: 
1. ಜಿ.ಪಿ ನಡ್ಡಾ (ಅಧ್ಯಕ್ಷ) 
2. ನರೇಂದ್ರ ಮೋದಿ 
3. ರಾಜನಾಥ್ ಸಿಂಗ್ 
4. ಅಮಿತ್ ಶಾ 
5. ಬಿಎಸ್​ ಯಡಿಯೂರಪ್ಪ 
6. ಸೊರ್ಬಾನಂದ್ ಸೋನವಾಲ 
7. ಕೆ.ಲಕ್ಷ್ಮಣ್ 
8. ಇಕ್ಬಾಲ್ ಸಿಂಗ್ ಲಾಲ್ ಪುರ 
9. ಸುಧಾ ಯಾದವ್ 
10. ಸತ್ಯ ನಾರಾಯಣ್ ಜಟಿಯಾ 
11. ಬಿಎಲ್​ ಸಂತೋಷ್ 

ಬಿಜೆಪಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸದಸ್ಯರ ಪಟ್ಟಿ: 
1. ಜಿ.ಪಿ ನಡ್ಡಾ (ಅಧ್ಯಕ್ಷ) 
2. ನರೇಂದ್ರ ಮೋದಿ 
3. ರಾಜನಾಥ್ ಸಿಂಗ್ 
4. ಅಮಿತ್ ಶಾ 
5. ಬಿಎಸ್​ ಯಡಿಯೂರಪ್ಪ 
6. ಸೊರ್ಬಾನಂದ್ ಸೋನವಾಲ 
7. ಕೆ.ಲಕ್ಷ್ಮಣ್ 
8. ಇಕ್ಬಾಲ್ ಸಿಂಗ್ ಲಾಲ್ ಪುರ 
9. ಸುಧಾ ಯಾದವ್ 
10. ಸತ್ಯ ನಾರಾಯಣ್ ಜಟಿಯಾ 
11. ಭುಪೇಂದ್ರ ಯಾದವ್ 
12. ದೇವೇಂದ್ರ ಫಡ್ನವಿಸ್ 
13 ಓಂ ಪ್ರಕಾಶ್ ಮಾಥುರ್ 
14 ಬಿಎಲ್​ ಸಂತೋಷ್ 
15 ವನತಿ ಶ್ರೀನಿವಾಸ್