ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೃದಯಾಘಾತದಿಂದ ನಿಧನ

ನವದೆಹಲಿ: ಬಿಸಿಸಿಐನ ಮಾಜಿ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಚೌಧರಿ ಅವರು 2002ರಿಂದ 2017ರವರೆಗೆ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (JSCA) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಮಾಜಿ IPS ಅಧಿಕಾರಿಯೂ ಆಗಿದ್ದರು. ಜಾರ್ಖಂಡ್‌ನ ಹೆಚ್ಚುವರಿ DGP ಆಗಿ ಸೇವೆ ಸಲ್ಲಿಸಿದ್ದರು. ಚೌಧರಿ ಅವರು 20 ತಿಂಗಳ ಕಾಲ ಜಾರ್ಖಂಡ್ ಲೋಕಸೇವಾ ಆಯೋಗದ (ಜೆಪಿಎಸ್‌ಸಿ) ಅಧ್ಯಕ್ಷರಾಗಿಯೂ ಇದ್ದರು.