ಕೆರಿಬಿಯನ್‌ ಕೆಫೆ ಮುಂದೆ ಪೋಸ್‌ ಕೊಟ್ಟ ವಿರುಷ್ಕಾ ದಂಪತಿ

ಕೆರಿಬಿಯನ್‌ ಕೆಫೆ ಮುಂದೆ ಪೋಸ್‌ ಕೊಟ್ಟ ವಿರುಷ್ಕಾ ದಂಪತಿ

2017 ರಲ್ಲಿ ಮುದುವೆಯಾದ ವಿರಾಟ್‌ ಅನುಷ್ಕಾ ,ಜನ ಪ್ರೀತಿಯಿಂದ ಇವರನ್ನು ವಿರುಷ್ಕಾ ಎಂದು ಕರೆಯುತ್ತಾರೆ. ಈ ಜೋಡಿಗೆ ವಾಮಿಕ ಅನ್ನುವ ಮಗಳಿದ್ದಾಳೆ. ಈ ಪುಟ್ಟ ಕುಂಟುಂಬ ಯಾವಾಗಲೂ ಸೋಶಿಯಲ್‌ ಮೀಡಿಯದಲ್ಲಿ ಫೋಟೋಸ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ ಹಾಗೂ ವಾಮಿಕ ಕೂಡ ಅವಗವಾಗ ಕಾಣಿಸಿಕೊಳ್ಳುತ್ತಾಳೆ. ಇತ್ತೀಚೆಗೆ ಈ ಜೋಡಿ ಕೆರಿಬಿಯನ್‌ನಲ್ಲಿ ಪ್ರವಾಸಕ್ಕೆ ಹೋಗಿದ್ದು ಅಲ್ಲಿ ಅವರಿಬ್ಬರು ಕೆಫೆಯ ಮುಂದೆ ಪೋಸ್ ನೀಡುತ್ತ ತೆಗೆದಿರುವ ಪೋಟೋವನ್ನು ಶೇರ್‌ ಮಾಡಿದ್ದಾರೆ. 

ಆಗಸ್ಟ್ 18 ರಂದು, ವಿರಾಟ್ ಕೊಹ್ಲಿ ಇನ್ಸ್ಟಾ ಗ್ರಾಂ ನಲ್ಲಿ ಪೋಸ್ಟ್‌ ಮಾಡಿರುವ ಈ ಪೋಟೋದಲ್ಲಿ ದಂಪತಿಗಳು ಕ್ಯಾಶುಯಲ್ ಬಟ್ಟೆಯಲ್ಲಿ ಕೆಫೆಯ ಹೊರಗೆ ನಿಂತಿರುವುದನ್ನು ಕಾಣಬಹುದು.ವಿರಾಟ್ ಕಪ್ಪು ಟೀ ಶರ್ಟ್ ಮತ್ತು ಹೂವಿನ ಪ್ರಿಂಟ್ ಹೊಂದಿರುವ ಬಿಳಿ ಶಾರ್ಟ್ಸ್ ಧರಿಸಿದ್ದರು ಮತ್ತು ಬಿಳಿ ಚಪ್ಪಲಿ, ಹಸಿರು ಬಣ್ಣದ ಕ್ಯಾಪ್ ನಲ್ಲಿದ್ದರೆ ಅನುಷ್ಕಾ ಡೆನಿಮ್ ನೀಲಿ ಬಣ್ಣದ ಉದ್ದನೆಯ ಶರ್ಟ್ ಮತ್ತು ಬಿಳಿ ಸ್ಯಾಂಡಲ್ ಮತ್ತು ಸನ್ ಗ್ಲಾಸ್ ಧರಿಸಿದ್ದರು. ಕೆಫೆಯ ಮೆನು ಬೋರ್ಡ್ ಮುಂದೆ ಒಟ್ಟಿಗೆ ಪೋಸ್ ಕೊಟ್ಟ ಇವರು ಕೆಫೆಯ ಆಹಾರ ಅದ್ಭುತವಾಗಿತ್ತು ಎಂದು "ಬಾರ್ಬಡೋಸ್ @cafealamer18 ಎಂದು ಟ್ಯಾಗ್‌ ಮಾಡಿದ್ದಾರೆ. 

ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ತಮ್ಮ ರಜೆಯಿಂದ ಮುಂಬೈಗೆ ಮರಳಿದ್ದಾರೆ. ಅದಕ್ಕೂ ಮುನ್ನ ಕೆರಿಬಿಯನ್ ಪ್ರದೇಶದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದೊಂದಿಗೆ ಸರಣಿ ಆಡುತ್ತಿದ್ದ ವಿರಾಟ್‌ ಗೆ ಬೆಂಬಲಿಸಲು ಅನುಷ್ಕಾ ಕೂಡ ತೆರಳಿದ್ದರು.ಅನುಷ್ಕಾ ಆಗಾಗ್ಗೆ ತನ್ನ ಪತಿಯೊಂದಿಗೆ ಅವರ ಕ್ರಿಕೆಟ್ ಪಂದ್ಯಗಳಿಗೆ ಹೋಗುವುದಲ್ಲದೇ ಚಪ್ಪಾಳೆ ಹೊಡೆದು ಹುರಿದುಂಬಿಸುತ್ತಿರುತ್ತಾರೆ. ಅನುಷ್ಕಾ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಸಿನಿಮಾ ಚಕ್ಡಾ 'ಎಕ್ಸ್‌ಪ್ರೆಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ವಿರಾಟ್ ಮುಂದಿನ ಕೆಲವು ತಿಂಗಳುಗಳಲ್ಲಿ ಪ್ರಾರಂಭವಾಗುವ ಪ್ರಮುಖ ಕ್ರೀಡಾ ಪಂದ್ಯಾವಳಿಗಳಿಗೆ ತಯಾರಿ ನಡೆಸುತ್ತಿದ್ದಾರೆ.