ಉಡುಪಿ: ಬ್ರೇಕಿಂಗ್ ನ್ಯೂಸ್ ಸಮವಸ್ತ್ರ ನಿಯಮ ಜಾರಿಯಾದರೂ ಕೇಸರಿ ಶಾಲು ಧರಿಸಿ ತರಗತಿಗೆ ಹೋಗುತ್ತಿರುವ ವಿದ್ಯಾರ್ಥಿಗಳು!

ಉಡುಪಿ: ಬ್ರೇಕಿಂಗ್ ನ್ಯೂಸ್  ಸಮವಸ್ತ್ರ ನಿಯಮ ಜಾರಿಯಾದರೂ ಕೇಸರಿ ಶಾಲು ಧರಿಸಿ ತರಗತಿಗೆ ಹೋಗುತ್ತಿರುವ ವಿದ್ಯಾರ್ಥಿಗಳು!

ಕುಂದಾಪುರ: ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ತೆರೆ ಎಳೆಯಲು ರಾಜ್ಯ ಸರಕಾರ ಸಮವಸ್ತ್ರ ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದೆ.ಹೀಗಿದ್ದರೂ ಇವತ್ತು ಕುಂದಾಪುರದ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಕೇಸರಿ ಶಾಲು ಕಾಣಿಸಿಕೊಂಡಿದೆ. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುತ್ತಿರುವ ದೃಶ್ಯ ಕಂಡುಬಂತು. ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಯಿಂದ ಮೆರವಣಿಗೆಯಲ್ಲಿ ಕಾಲೇಜಿನತ್ತ ಹೋಗುತ್ತಿದ್ದಾರೆ. ಮೆರವಣಿಗೆ ಮೂಲಕ ಹೋಗುವಾಗ ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದಾರೆ.