ನಟ ಚೇತನ್ ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ನ್ಯಾಯಾಂಗ ನಿಂದನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅಹಿಂಸಾರನ್ನು ಫೆ.22 ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಸದ್ಯ ನಟ ಚೇತನ್ ಜೈಲು ಪಾಲಾಗಿದ್ದು 14 ದಿನ ನ್ಯಾಯಾಂಗ ಬಂಧನವಾಗಿದೆ. ನಿನ್ನೆ ತಡ ರಾತ್ರಿ ಚೇತನ್ ಅವರನ್ನು 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ಚೇತನ್ ಪರ ವಕೀಲ್ ಕೆ.ಎ ಬಾಲನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ರು,ನ್ಯಾಯದೀಶರು ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದು 14 ದಿನ ನ್ಯಾಯಂಗ ಬಂಧನಕ್ಕೆ ಆದೇಶಿಸಿದ್ದಾರೆ.