ಹೀರಾನಗರದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭ

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಭಾನುವಾರ ಬೆಳಿಗ್ಗೆ ಜಮ್ಮು ಕಾಶ್ಮೀರದ ಕಥವಾ ಜಿಲ್ಲೆಯ ಹೀರಾನಗರದಿಂದ ಪುನರಾರಂಭಗೊಂಡಿದೆ.
ಶನಿವಾರ ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ನಡದ ಅವಳಿ ಸ್ಫೋಟದಲ್ಲಿ ಒಂಭತ್ತು ಜನರು ಗಾಯಗೊಂಡಿದ್ರು. ಈನಡುವೆಯೂ ಅಲ್ಲಿಂದಲೆ ಜಾತ್ರೆ ಮುಂದುರೆದಿದೆ. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಏನೇ ಆದರೂ ಯಾತ್ರೆ ಮುಂದುವರೆಯುತ್ತದೆ ಎಂದಿದ್ದಾರೆ.
ಇನ್ನು ಈ ಭಾರತ್ ಜೋಡೋ ಯಾತ್ರೆಯು ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯವಾಗಲಿದೆ. ಯಾತ್ರೆಯ ಉದ್ದಕ್ಕೂ ಅನೇಕ ಹಿರಿಯರು, ಅನುಭವಿಗಳು, ಕಾರ್ಯಕರ್ತರು ಜೊತೆಯಾಗಿದ್ದಾರೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.