ಮೋದಿ ಜನ್ಮದಿನದಂದು ದಾಖಲೆಯ ಲಸಿಕಾಕರಣ: ಎರಡೂವರೆ ಕೋಟಿ ಡೋಸ್ ವಿತರಣೆ

ಮೋದಿ ಜನ್ಮದಿನದಂದು ದಾಖಲೆಯ ಲಸಿಕಾಕರಣ: ಎರಡೂವರೆ ಕೋಟಿ ಡೋಸ್ ವಿತರಣೆ

ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದಂದು ಇಡೀ ದೇಶಾದ್ಯಂತ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದ ಬಿಜೆಪಿ ತನ್ನ ನಿರೀಕ್ಷೆಯಂತೆ ಯಶಸ್ಸು ಕಂಡಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲ ಆರೋಗ್ಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಬಿಜೆಪಿ ಧನ್ಯವಾದ ತಿಳಿಸಿದೆ. ಪ್ರಧಾನಿಯ ಜನ್ಮದಿನದಂದು ಭಾರತವು ಒಂದೇ ದಿನದಲ್ಲಿ ಎರಡೂವರೆ ಕೋಟಿ ಡೋಸ್ ಲಸಿಕೆ ನೀಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಕೋ-ವಿನ್ ಪೋರ್ಟಲ್‌ನ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯರಾತ್ರಿ 12ರವರೆಗೆ ದೇಶದಲ್ಲಿ 2,50,10,112 ಲಸಿಕೆ ವಿತರಣೆ ಮಾಡಲಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆ ಸಂಖ್ಯೆ 79.33 ಕೋಟಿ ಡೋಸ್ ತಲುಪಿದೆ.