ಹೈದರಾಬಾದ್: ಭಾರೀ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಸಿಕಂದರಾಬಾದ್ ಕ್ಲಬ್, 40 ಕೋಟಿ ರೂ. ನಷ್ಟ

ಹೈದರಾಬಾದ್: ಭಾರೀ ಅಗ್ನಿ ಅವಘಡ; ಸುಟ್ಟು ಭಸ್ಮವಾದ ಸಿಕಂದರಾಬಾದ್ ಕ್ಲಬ್, 40 ಕೋಟಿ ರೂ. ನಷ್ಟ

ಹೈದರಾಬಾದ್: ಇಂದು ಮುಂಜಾನೆ ಸಂಭವಿಸಿದ ಭಾರೀ ಬೆಂಕಿಯಲ್ಲಿ ಭಾರತದ ಅತ್ಯಂತ ಹಳೆಯ ಪ್ರತಿಷ್ಠಿತ ಕ್ಲಬ್‌ವೊಂದು ಧ್ವಂಸವಾಗಿದೆ. ದೇಶದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾದ ತೆಲಂಗಾಣದ ಸಿಕಂದರಾಬಾದ್ ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 144 ವರ್ಷಗಳಷ್ಟು ಹಳೆಯದಾದ ಕಟ್ಟಡ ಸುಟ್ಟು ಭಸ್ಮವಾಗಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಪಾರಂಪರಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 1878 ರಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಸಿಕಂದರಾಬಾದ್ ಕ್ಲಬ್ ಭಾರತದ ಐದು ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದು ಹಚ್ಚ ಹಸಿರಿನ 22 ಎಕರೆ ಕ್ಯಾಂಪಸ್‌ನಲ್ಲಿದೆ. ಅಗ್ನಿ ಅವಘಡದಿಂದಾಗಿ 35-40 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.