ದೇಶದಲ್ಲಿ ಹೆಚ್ಚಿದ ಕೋವಿಡ್-ಒಂದೇ ದಿನ 54 ಜನ ಸಾವು

ನವದೆಹಲಿ: ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿದೆ. ದಿನವೂ ಇದರ ಏರಿಳಿತಗಳೂ ಇದೆ. ಒಂದು ದಿನ ಇಳಿಕೆ ಇದ್ದರೆ, ಮತ್ತೊಂದು ದಿನ ಸೋಂಕಿನ ಸಂಖ್ಯೆ ಗಗನಕ್ಕೇರುತ್ತದೆ. ಬನ್ನಿ, ಹೇಳುತ್ತೇವೆ ಒಂದೇ ಒಂದು ದಿನದ ಒಟ್ಟು ಲೆಕ್ಕಾಚಾರ ಎಷ್ಟು ಅಂತಲೇ ನೋಡೋಣ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 2,897 ಹೊಸ ಕೋವಿಡ್ ಪ್ರಕರಣಗಳು ಪತ್ತೆ ಆಗಿವೆ. ಒಟ್ಟು ಪ್ರಕರಣದ ಲೆಕ್ಕವನ್ನ ತೆಗೆದುಕೊಂಡರೆ, 4,31,10,586 ಪ್ರಕರಣಗಳು ದಾಖಲಾಗಿವೆ.
ದುರಂತ ಅಂದ್ರೆ, ಕಳೆದ ಒಂದೇ ಒಂದು ದಿನಕ್ಕೆ 54 ಜನ ಕೋವಿಡ್ ಗೆ ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 5,24,157ಕ್ಕೆ ಏರಿಕೆ ಆಗಿದೆ. ಸದ್ಯ ದೇಶದಲ್ಲಿ 19,494 ಸಕ್ರಿಯ ಪ್ರಕರಣಗಳಿದ್ದು,ಚೇತರಿಕೆ ಲೆಕ್ಕ ಶೇಕಡ 98.74 ರಷ್ಟಿದೆ.