BIG BREAKING: ಮೇ 10ರಂದು ಕರ್ನಾಟಕ ವಿಧಾನ ಸಭೆಗೆ ಮತದಾನ- ಮೇ 13ಕ್ಕೆ ಫಲಿತಾಂಶ

ನವದೆಹಲಿ: ಕರ್ನಾಟಕ ರಾಜ್ಯ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 10ರಂದು ಮತದಾನ ನಡೆಯಲಿದೆ. ಮೇ 13 ಫಲಿತಾಂಶ ಹೊರಬೀಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್‌ಕುಮಾರ್ ರಾಜ್ಯ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಆರಂಭದಿಂದ ಫಲಿತಾಂಶ ಬರುವವರೆಗೆ ಯಾವುದಕ್ಕೆ ಯಾವ ದಿನಾಂಕ ಕೊನೆ? ಯಾವ ದಿನಾಂಕದಂದು ಏನು ನಡೆಯಲಿದೆ ಎಂಬ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.
*ಏಪ್ರಿಲ್ 13 ಕ್ಕೆ ಅಧಿಸೂಚನೆ
*ಏಪ್ರಿಲ್ 20 ನಾಮಪತ್ರ ಸಲ್ಲಿಸಲು ಕೊನೆದಿನ
*21ಕ್ಕೆ ನಾಮಪತ್ರ ಪರಿಶೀಲನೆ
*ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆ ದಿನ
*ಮೇ 10ರಂದು ಮತದಾನ
ಮೇ 13ಕ್ಕೆ ಫಲಿತಾಂಶ
ಮೇ 23ರ ಒಳಗಾಗಿ ಹೊಸ ಚುನಾಯಿತ ಸರಕಾರ ಅಸ್ತಿತ್ವಕ್ಕೆ
ಇಂದಿನಿಂದಲೇ ನೀತಿ ಸಂಹಿತೆ ಜಾರಿ