ಸರ್ಕಾರಿ ನೌಕರರ ‘ನಿವೃತ್ತಿ ವಯಸ್ಸು’ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೇಂದ್ರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಲು ಭಾರತ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ನಿವೃತ್ತಿ ವಯಸ್ಸನ್ನು 2 ವರ್ಷ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರದಿಂದ ಲಕ್ಷಾಂತರ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಮತ್ತು ಅವರು ಈಗ 62 ವರ್ಷ ವಯಸ್ಸಿನವರೆಗೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಉದ್ಯೋಗಿಗಳ ಹಿತದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಅವರು ದೀರ್ಘಾವಧಿಯವರೆಗೆ ಸೇವೆ ಸಲ್ಲಿಸಬಹುದು ಮತ್ತು ಅವರ ಅನುಭವದ ಪ್ರಯೋಜನವನ್ನು ಪಡೆಯಬಹುದು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ನರೇಂದ್ರ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ ಎಂಬ ಸುದ್ದಿ ಬಂದಿದೆ.
ಇದರಿಂದಾಗಿ ಅನುಭವಿ ಉದ್ಯೋಗಿಗಳ ಸೇವೆಯನ್ನ ಹೆಚ್ಚು ದಿನ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿ ಹಬ್ಬಿದೆ. ಈಗಿರುವ ಉದ್ಯೋಗಗಳನ್ನ ಬದಲಿಸದೆ, ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದು ನಿರುದ್ಯೋಗಿಗಳ ಅಸಮಾಧಾನಕ್ಕೆ ಕಾರಣವಾಗುವುದು ಖಚಿತ.
ಈ ವಯೋಮಿತಿ ಹೆಚ್ಚಳ ಪ್ರಸ್ತಾವನೆ ಬಹಳ ದಿನಗಳಿಂದ ಕೇಂದ್ರದಲ್ಲಿ ಬಾಕಿ ಇದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗೂ ಮುನ್ನ ಕೇಂದ್ರ ಸಚಿವ ಸಂಪುಟ ನೌಕರರ ನಿವೃತ್ತಿ ವಯೋಮಿತಿ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ನಿರ್ಧಾರವು 1 ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದರು. ಒಟ್ಟಿನಲ್ಲಿ ಈ ನಿರ್ಧಾರದಿಂದ ಕೆಲವು ಲಕ್ಷ ಜನರಿಗೆ ಅನುಕೂಲವಾಗುವುದು ಖಚಿತ.