ಹಿಜಾಬ್‌ಗಾಗಿ ಪ್ರತಿಭಟನೆ: 12 ವಿದ್ಯಾರ್ಥಿನಿಯರ ಮೇಲೆ ಎಫ್‌ಐಆರ್

ತುಮಕೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಮುಂದುವರೆದಿದೆ. ಈ ನಡುವೆ ತುಮಕೂರಿನಲ್ಲಿ ಹಿಜಾಬ್ ಬೇಕು ಎಂದು ಪ್ರತಿಭಟನೆ ನಡೆಸಿದ 12 ವಿದ್ಯಾರ್ಥಿನಿಯರ ವಿರುದ್ದ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ತುಮಕೂರಿನ ಎಂಪ್ರೆಸ್ ಕಾಲೇಜಿನ 12 ವಿದ್ಯಾರ್ಥಿನಿಯರ ಮೇಲೆ ಎಫ್ಐಆರ್ ದಾಖಲಾಗಿದೆ. ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಹೋಗುವುದಾಗಿ ಪಟ್ಟು ಹಿಡಿದು ಗುರುವಾರ ಗುಂಪು ಕಟ್ಟಿಕೊಂಡು ಕಾಲೇಜಿನ ಎದುರು ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದರು. ಶಾಲಾ ಕಾಲೇಜು ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಯಲಿದ್ದು, ಗುಂಪು ಸೇರಿ ಪ್ರತಿಭಟಿಸದಂತೆ ಪೊಲೀಸರು ಎಚ್ಚರಿಸಿದ್ದರು.