ಬೆಂಗಳೂರು- ಅಯೋಧ್ಯೆಗೆ ಜನವರಿ 17ರಿಂದ ಏರ್ ಇಂಡಿಯಾ ವಿಮಾನ ಯಾನ ಸೌಲಭ್ಯ

ಬೆಂಗಳೂರು- ಅಯೋಧ್ಯೆಗೆ ಜನವರಿ 17ರಿಂದ ಏರ್ ಇಂಡಿಯಾ ವಿಮಾನ ಯಾನ ಸೌಲಭ್ಯ

ಬೆಂಗಳೂರು : 2024ರ ಜನವರಿ 22ರಂದು ಅಯೋಧ್ಯೆಗೆ ತೆರಳುವವರ ಸಂಖ್ಯೆ ಅತ್ಯಧಿಕವಾಗಿ ಇರುವುದರಿಂದ ಏರ್ ಇಂಡಿಯಾ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸಂಚಾರ ಆರಂಭಿಸಲಿದೆ. ಜನವರಿ 17ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರು ಹಾಗೂ ಕೋಲ್ಕೊತ್ತಾದಿಂದ ಅಯೋಧ್ಯೆಗೆ ನೇರವಾಗಿ ವಿಮಾನ ಯಾನ ಸೌಲಭ್ಯ ಆರಂಭಿಸಲಿದೆ. 

ಅಂದು ಬೆಳಗ್ಗೆ 8.05ಕ್ಕೆ ಹೊರಟು 10.35ಕ್ಕೆ ಅಯೋಧ್ಯೆಗೆ ತಲುಪಲಿದೆ. ಅಯೋಧ್ಯೆಯಿಂದ ಅಪರಾಹ್ನ 3.40ಕ್ಕೆ ಹೊರಟು ಸಂಜೆ 6.10ಕ್ಕೆ ಬೆಂಗಳೂರು ತಲುಪಲಿದೆ. airindiaexpress.com ವೈಬ್ ಸೈಟ್ ಹಾಗೂ ಆ್ಯಪ್ ಗಳಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.