6 ರಿಂದ 12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಗೆ ಸಿಕ್ತು ಅನುಮತಿ

ದೇಶದಲ್ಲಿ ಮತ್ತೆ ಕೊರೊನಾ 4ನೇ ಅಲೇ ಅಬ್ಬರ ಕ್ರಮೇಣ ಹೆಚ್ಚಾಗುತ್ತಿರುವ ಬೆನ್ನಲ್ಲೇ 6 ರಿಂದ 12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಬಳಕೆ ಸಂಬಂಧಿಸಿದಂತೆ ಇಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಈ ನಡುವೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ 1 ರಿಂದ 5ನೇ ತರಗತಿಯ ಮಕ್ಕಳಿಗೂ ವ್ಯಾಕ್ಸಿನ್ ನೀಡುವ ದಾರಿ ಸುಗಮಾವಾಗಿದೆ.
6 ರಿಂದ 12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಎಮರ್ಜೆನ್ಸಿ ಬಳಕೆಗೆ ಅನುಮತಿಯನ್ನು ಇಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನೀಡಿದೆ. ಹಾಗೆ ನೋಡಿದ್ರೆ ಡಿಸೆಂಬರ್ 2, 2021ರಿಂದಲೇ 12-18 ವರ್ಷದ ಮಕ್ಕಳಿಗೆ ಝೈಕೋವ್-ಡಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ನಡುವೆ ಈಗ 6-12 ವರ್ಷದ ಮಕ್ಕಳಿಗೆ ಯಾವಾಗ ವ್ಯಾಕ್ಸಿನ್? ಎನ್ನುವ ಪ್ರಶ್ನೆಗೆ ಇಂದು ಕೇಂದ್ರ ಸರ್ಕಾರ ಈ ವಯೋಮಾನದ ಮಕ್ಕಳಿಗೂ ವ್ಯಾಕ್ಸಿನ್ ನೀಡಲು ನಿರ್ಧಾರ ಮಾಡಿದೆ.