Breaking news: ಇಸ್ರೋದ ಮೊದಲ ‘ಬ್ಲ್ಯಾಕ್ ಹೋಲ್ ಮಷಿನ್’ ಯಶಸ್ವಿ ಉಡಾವಣೆ..!

ಹೊಸ ವರ್ಷದ ಮೊದಲ ದಿನದಂದು ಇಸ್ರೋ ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹವನ್ನು (XPoSAT) ಯಶಸ್ವಿಯಾಗಿ ಲಾಂಚ್ ಮಾಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಬೆಳಗ್ಗೆ 9.10ಕ್ಕೆ ಸುಧಾರಿತ (advanced astronomy) ಖಗೋಳ ವೀಕ್ಷಣಾಲಯವನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿದೆ.
ಈ ಮೂಲಕ 260 ಟನ್ ತೂಕ ಇರುವ PSLV ರಾಕೆಟ್ ತನ್ನ 60ನೇ ಉಡಾವಣೆಯನ್ನು ಯಶಸ್ವಿಗೊಳಿಸಿದೆ. ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಿಎಸ್ಎಲ್ವಿ-ಸಿ 58 (PSLV-C58) ರಾಕೆಟ್ನಲ್ಲಿ ಎರಡು ಪ್ರಮುಖ ಪೆಲೋಡ್ಗಳನ್ನು ಕಳುಹಿಸಲಾಗಿದೆ. POLIX ಮತ್ತು XSPECT ಎಂಬ ಪೆಲೋಡ್ಗಳನ್ನು ಹೊತ್ತೊಯ್ದಿದೆ. ಉಪಗ್ರಹ XPoSAT ಕಾರ್ಯಾಚರಣೆಯ ಜೀವಿತಾವಧಿ 5 ವರ್ಷ ಆಗಿದೆ.
ಸ್ಯಾಟಲೈಟ್ ಮೂಲಕ ಖಗೋಳದಲ್ಲಿರುವ ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಉದ್ದೇಶಿಸಿದೆ. ಇದರೊಂದಿಗೆ, ಕಪ್ಪು ಕುಳಿಗಳನ್ನು ಅಧ್ಯಯನ ಮಾಡಲು ‘ವೀಕ್ಷಣಾಲಯ’ ಹೊಂದಿರುವ ಯುಎಸ್ ನಂತರ ಭಾರತ ಎರಡನೇ ದೇಶವಾಗಿದೆ.