ಪಂಜಾಬ್ ಆಯ್ತು ಈಗ ಹಿಮಾಚಲ ಪ್ರದೇಶದ ಮೇಲೂ ಎಎಪಿ ಕಣ್ಣು

ಪಂಜಾಬ್ ಆಯ್ತು ಈಗ ಹಿಮಾಚಲ ಪ್ರದೇಶದ ಮೇಲೂ ಎಎಪಿ ಕಣ್ಣು

ನವದೆಹಲಿ: ಪಂಜಾಬ್‌ ವಿಧಾನಸಭೆಯ ಗೆಲುವಿನ ನಂತರ, ಆಮಾ ಆದ್ಮಿ ಪಕ್ಷವು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 68 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ. ಹಿಮಾಚಲ ಪ್ರದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿರುವ ಆಪ್ ನಾಯಕ ಸತ್ಯೇಂದ್ರ ಜೈನ್, ರಾಜ್ಯದಲ್ಲಿ ಆಪ್ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ನವೆಂಬರ್‌ನಲ್ಲಿ ನಡೆಯಲಿದೆ.