ಐಪಿಎಲ್ 2022: ಎಲ್ಲಾ 10 ತಂಡಗಳ ನಾಯಕರ ಪಟ್ಟಿ ಇಲ್ಲಿದೆ ನೋಡಿ

ಐಪಿಎಲ್ 2022: ಎಲ್ಲಾ 10 ತಂಡಗಳ ನಾಯಕರ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನೈದನೇ ಆವೃತ್ತಿಯು ಮಾರ್ಚ್ 26ರಿಂದ ಆರಂಭವಾಗಲಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳನ್ನಾಗಿ ವಿಭಜಿಸಲಾಗಿದೆ. ಗ್ರೂಪ್ 'ಎ'ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಜಸ್ತಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿದ್ದರೆ, ಗ್ರೂಪ್ 'ಬಿ'ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳಿವೆ. ಇನ್ನು ಇಂದು (ಮಾರ್ಚ್ 12) ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ನೂತನ ನಾಯಕನನ್ನು ಘೋಷಣೆ ಮಾಡಿದ್ದು, ಎಲ್ಲಾ ತಂಡಗಳ ನಾಯಕರ ಸಂಪೂರ್ಣ ಚಿತ್ರಣ ದೊರೆತಿದೆ. ಎಲ್ಲಾ 10 ತಂಡಗಳ ನಾಯಕರ ಪಟ್ಟಿ: * ರಾಯಲ್ ಚಾಲೆಂಜರ್ಸ್ ಬೆಂಗಳೂರು - ಫಾಫ್ ಡು ಪ್ಲೆಸಿಸ್ * ಲಕ್ನೋ ಸೂಪರ್‌ ಜೈಂಟ್ಸ್ - ಕೆಎಲ್ ರಾಹುಲ್ * ಪಂಜಾಬ್ ಕಿಂಗ್ಸ್ - ಮಯಾಂಕ್ ಅಗರ್ವಾಲ್ *ಚೆನ್ನೈ ಸೂಪರ್‌ ಕಿಂಗ್ಸ್ - ಎಂಎಸ್ ಧೋನಿ * ಗುಜರಾತ್ ಟೈಟಾನ್ಸ್ - ಹಾರ್ದಿಕ್ ಪಾಂಡ್ಯ * ಮುಂಬೈ ಇಂಡಿಯನ್ಸ್ - ರೋಹಿತ್ ಶರ್ಮಾ * ಡೆಲ್ಲಿ ಕ್ಯಾಪಿಟಲ್ಸ್ - ರಿಷಭ್ ಪಂತ್ * ಕೋಲ್ಕತಾ ನೈಟ್ ರೈಡರ್ಸ್ - ಶ್ರೇಯಸ್ ಅಯ್ಯರ್ * ರಾಜಸ್ಥಾನ್ ರಾಯಲ್ - ಸಂಜು ಸ್ಯಾಮ್ಸನ್ * ಸನ್ ರೈಸರ್ಸ್ ಹೈದರಾಬಾದ್ - ಕೇನ್ ವಿಲಿಯಮ್ಸನ್