ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ ಫೈನಲ್‌ಗೆ ಎಂಟ್ರಿ

ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ ಫೈನಲ್‌ಗೆ ಎಂಟ್ರಿ

ಪ್ಯಾರಿಸ್: ಹಲವು ಪ್ರಥಮಗಳ ಸರದಾರ, ಭಾರತದ ಸ್ಟಾರ್ ಕ್ರೀಡಾಪಟು ನೀರಜ್ ಚೋಪ್ರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ ಥೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅಮೋಘ ಪ್ರದರ್ಶನದಿಂದಾಗಿ ಫೈನಲ್‌ಗೆ ತಲುಪಿದ್ದಾರೆ. 

ನೀರಜ್ ಚೋಪ್ರಾ ಅವರು ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಲು ತಮ್ಮ ಮೊದಲ ಪ್ರಯತ್ನದಲ್ಲಿ 89.34 ಮೀ ದೂರವನ್ನು ಎಸೆದರು. ಈ ಮೂಲಕ ಅವರು ಆಗಸ್ಟ್ 8ರಂದು ರಾತ್ರಿ 11:55 ಗಂಟೆಗೆ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಹರ್ಯಾಣದ ಕ್ರೀಡಾಪಟು ಆಗಸ್ಟ್ 8ರಂದು ನಡೆಯಲಿರುವ ಫೈನಲ್‌ನಲ್ಲಿ ಪದಕ ಪಡೆಯುವ ವಿಶ್ವಾಸ ಮೂಡಿಸಿದ್ದಾರೆ. 

ಚೋಪ್ರಾ ಒಂದು ವೇಳೆ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಒಲಿಂಪಿಕ್ಸ್ ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಹಾಗೂ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಐದನೇ ಕ್ರೀಡಾಳುವೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.