ಬ್ರೇಕಿಂಗ್: ರಾಜ್ಯದಲ್ಲಿ ಇಂದು 7,178 ಮಂದಿಗೆ ಪಾಸಿಟಿವ್, 93 ಸಾವು

ಬ್ರೇಕಿಂಗ್: ರಾಜ್ಯದಲ್ಲಿ ಇಂದು 7,178 ಮಂದಿಗೆ ಪಾಸಿಟಿವ್, 93 ಸಾವು

ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ನಿಲ್ಲುತ್ತಿಲ್ಲ. ಇಂದು ಹೊಸದಾಗಿ ಮಂದಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ. 
ರಾಜ್ಯದಲ್ಲಿ ಇಂದು 93 ಮಂದಿ ಡೆಡ್ಲಿ ವೈರಸ್ ಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 3,091 ಕ್ಕೆ ಏರಿಕೆಯಾಗಿದೆ. 

89238 ಸೊಂಕಿತರು ಚೇತರಿಸಿಕೊಂಡಿದ್ದಾರೆ ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 3091 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 08 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 683 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 79765 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ. 

ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2665 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಬಳ್ಳಾರಿ (607), ಉಡುಪಿ (313), ಬೆಳಗಾವಿ (302),ರಾಯಚೂರು (295), ಕಲಬುರಗಿ (261), ಧಾರವಾಡ (261),ಯಾದಗಿರಿ (200), ದಕ್ಷಿಣ ಕನ್ನಡ(194), ತುಮಕೂರು (177) ಕೊಪ್ಪಳ (163),ಬಾಗಲಕೋಟೆ (149), ವಿಜಯಪುರ (143), ಮೈಸೂರು (138), ಹಾಸನ (133 ), ದಾವಣಗೆರೆ (132), ಉತ್ತರ ಕನ್ನಡ (117) ಹಾಗೂ ಮಂಡ್ಯ (101) ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.