IPL 2025 | ಲಕ್ನೋ ಗೆಲುವಿನ ಕನಸನ್ನು ಭಗ್ನಗೊಳಿಸಿದ ಅಶುತೋಷ್ ಅಬ್ಬರ - ಡೆಲ್ಲಿಗೆ ರೋಚಕ ಗೆಲುವು

ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದಲಕ್ನೋ ಸೂಪರ್ ಜೈಂಟ್ಸ್ ತಂಡವು 3 ಎಸೆತಗಳು ಬಾಕಿ ಇರುವಂತೆ 1ವಿಕೆಟ್‌ನಿಂದ ಗೆಲುವು ಸಾಧಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ಇಂದು ನಡೆದ IPL 2025ರ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್ ಸೋತಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡವು 8 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತ್ತು. 210 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ತಂಡವು 19.3 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವು ಸಾಧಿಸಿದೆ.
ತಂಡದ ಪರ ಅಶುತೋಷ್ ಶರ್ಮಾ ಅಜೇಯ 66 ರನ್ ಬಾರಿಸಿದರೆ, ವಿಪ್ರಜ್ ನಿಗಮ್ 39 ರನ್ ಹಾಗೂ ಟ್ರಿಸ್ಟಾನ್ ಸ್ಟಬ್ಸ್ 34 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಲಕ್ನೋ ತಂಡದ ಪರ ಮಿಚೆಲ್ ಮಾರ್ಷ್ 72 ರನ್ (36 ಎಸೆತ, 6 ಬೌಂಡರಿ, 6 ಸಿಕ್ಸ್), ನಿಕೋಲಸ್ ಪೂರನ್ 75 ರನ್ (30 ಎಸೆತ, 6 ಬೌಂಡರಿ, 7 ಸಿಕ್ಸ್) ಹಾಗೂ ಡೇವಿಡ್ ಮಿಲ್ಲರ್ 27 ರನ್ ಬಾರಿಸಿದ್ದರು. ಆದರೆ ನಾಯಕ ರಿಷಬ್ ಪಂತ್ 6 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ ಗಳಿಸಿದರೆ ವಿಕೆಟ್ ಒಪ್ಪಿಸಿದ್ದರು.
ಇನ್ನು ಡೆಲ್ಲಿ ಪರ ಮಿಚೆಲ್ ಸ್ಟಾರ್ ಪ್ರಮುಖ 3 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ 2 ವಿಕೆಟ್, ಮುಖೇಶ್ ಕುಮಾರ್ ಹಾಗೂ ವಿಪ್ರಜ್ ನಿಗಮ್ ತಲಾ 1 ವಿಕೆಟ್ ಪಡೆದುಕೊಂಡಿದ್ದರು.