ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರ್ತಾರಾ ?

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರ್ತಾರಾ ?

ನವದೆಹಲಿ: ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಳ್ತಾನೇ ಇದೆ. ಪಕ್ಷದ ಮುಖಂಡರೂ ಕೂಡ ಪಕ್ಷದ ಉಳಿವಿಗಾಗಿ ಏನೇನೋ ಸರ್ಕಸ್ ಮಾಡ್ತಿದ್ದಾರೆ. ಆದರೆ, ಚುನಾವಣೆ ಚಾಣಕ್ಯ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ತಾರೆ ಅನ್ನೋ ಸುದ್ದಿ ಈಗ ಬಲವಾಗಿಯೇ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡೋ ರೀತಿಯಲ್ಲಿಯೇ ಕೆಲವು ಬೆಳವಣಿಗೆಗಳು ಆಗಿವೆ.ಕಳೆದ ಮೂರು ದಿನಗಳಲ್ಲಿ 2 ಸಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನ ಪ್ರಶಾಂತ್ ಕಿಶೋರ್ ಮೀಟ್ ಆಗಿದ್ದಾರೆ. ಈ ವರ್ಷದ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆ ಬಗ್ಗೆ ಮಾತನಾಡಲಿಕ್ಕೇನೆ ಪ್ರಶಾಂತ್ ಕಿಶೋರ್ ಈಗ ಸೋನಿಯಾ ಭೇಟಿ ಆಗಿದ್ದಾರೆ. ಆದರೆ, ಹರಿದಾಡುತ್ತಿರೋ ಸುದ್ದಿಯಿಂದಲೇ ಈ ಭೇಟಿ ಮತ್ತಷ್ಟು ಕುತೂಹಲ ಕೆರಳಿಸಿದೆ.