ಸತತ 6 ದಿನಗಳ ಗೂಳಿ ಅಬ್ಬರಕ್ಕೆ ತಡೆ - ಸೆನ್ಸೆಕ್ಸ್ 269, ನಿಫ್ಟಿ 65 ಅಂಕ ಇಳಿಕೆ

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಸತತ ಆರು ದಿನಗಳಿಂದ ಗೂಳಿ ಅಬ್ಬರ ಜೋರಾಗಿತ್ತು. ಆದರೆ ಇಂದು (ಶುಕ್ರವಾರದ) ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 269 ಅಂಶ ಇಳಿಕೆಯಾಗಿ, 77,209ಕ್ಕೆ ಅಂತ್ಯಗೊಂಡಿತು. ದಿನದ ವಹಿವಾಟಿನ ವೇಳೆ 676 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 65 ಅಂಶ ಕಡಿಮೆಯಾಗಿ 23,501ಕ್ಕೆ ಸ್ಥಿರಗೊಂಡಿತು. ವಹಿವಾಟಿನ ವೇಳೆ ಸೂಚ್ಯಂಕವು 100 ಅಂಶ ಏರಿಕೆಯಾಗಿತ್ತು.
ಈ ನಡುವೆಯೇ ಭಾರ್ತಿ ಏರ್‌ಟೆಲ್, ಇನ್ಫೊಸಿಸ್, ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೊ ಮತ್ತು ಎನ್‌ಟಿಪಿಸಿ ಷೇರುಗಳು ಗಳಿಕೆ ಕಂಡಿವೆ.
ಸೆನ್ಸೆಕ್ಸ್ ಗುಚ್ಛದಲ್ಲಿನ ಅಲ್ಟ್ರಾಟೆಕ್ ಸಿಮೆಂಟ್, ಲಾರ್ಸೆನ್ ಆ್ಯಂಡ್ ಟೊಬ್ರೊ, ಟಾಟಾ ಮೋಟರ್ಸ್, ನೆಸ್ಲೆ ಇಂಡಿಯಾ, ಟಾಟಾ ಸ್ಟೀಲ್, ಹಿಂದುಸ್ತಾನ್ ಯೂನಿಲಿವರ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.