31,000 ಕೋಟಿ ರೂ ಬೆಳೆ ಸಾಲ ಮನ್ನಾಕ್ಕೆ ತೆಲಂಗಾಣ ಸಚಿವ ಸಂಪುಟ ನಿರ್ಧಾರ

ಹೈದರಾಬಾದ್: ತೆಲಂಗಾಣ ರಾಜ್ಯ ಸಚಿವ ಸಂಪುಟವು 2018ರ ಡಿಸೆಂಬರ್ 12 ಮತ್ತು 2023ರ ಡಿಸೆಂಬರ್ 9 ನಡುವೆ ತೆಗೆದುಕೊಂಡಿರುವ ₹ 2 ಲಕ್ಷದವರೆಗಿನ ಎಲ್ಲಾ ಬೆಳೆ ಸಾಲಗಳನ್ನು ಮನ್ನಾ ಮಾಡಲು ನಿರ್ಧರಿಸಿದೆ. ಈ ನಿರ್ಧಾರಕ್ಕೆ 31,000 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಘೋಷಿಸಿದ್ದಾರೆ.
ಉಪ ಸಮಿತಿಯು ಜುಲೈ 15ರೊಳಗೆ ಅರ್ಹತಾ ಮಾನದಂಡಗಳನ್ನು ಅಂತಿಮಗೊಳಿಸುತ್ತದೆ. ಕಂದಾಯ ಮತ್ತು ಐಟಿ ಸಚಿವರು ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಲಿದ್ದಾರೆ.