ಕೊಲ್ಕತಾ: ಕೆಎಂಸಿ ಚುನಾವಣೆ ವೇಳೆ ಬಾಂಬ್ ಸ್ಪೋಟ-ಇಬ್ಬರಿಗೆ ಗಾಯ-ಒಬ್ಬರ ಸ್ಥಿತಿ ಗಂಭೀರ

ಕೊಲ್ಕತಾ: ಕೆಎಂಸಿ ಚುನಾವಣೆ ವೇಳೆ ಬಾಂಬ್ ಸ್ಪೋಟ-ಇಬ್ಬರಿಗೆ ಗಾಯ-ಒಬ್ಬರ ಸ್ಥಿತಿ ಗಂಭೀರ

ಕೊಲ್ಕತಾ:ಇಲ್ಲಿಯ ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ವೇಳೆ ಬಾಂಬ್ ಸ್ಪೋಟಗೊಂಡಿದೆ.ಮೂವರು ಮತದಾರರು ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಸೀಲ್ದಾ ಪ್ರದೇಶದಲ್ಲಿ ನಡೆದ ಈ ಸ್ಪೋಟದಲ್ಲಿ ಒಬ್ಬರು ಕಾಲು ಕಳೆದುಕೊಂಡಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನದ ವೇಳೆ ವಾರ್ಡ್ ಸಂಖ್ಯೆ 36 ರಲ್ಲಿ ಶಾಲೆಯ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಆದರೆ ಸ್ಪೋಟಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಿಲ್ಲ.