ಹೊಸ ವರ್ಷದ ಮೊದಲ ದಿನ ಕಾಶಿಗೆ ಭೇಟಿ ಕೊಟ್ಟ 5 ಲಕ್ಷ ಜನ

ಹೊಸ ವರ್ಷದ ಮೊದಲ ದಿನ ಕಾಶಿಗೆ ಭೇಟಿ ಕೊಟ್ಟ 5 ಲಕ್ಷ ಜನ

ವಾರಾಣಸಿ(ಉತ್ತರ ಪ್ರದೇಶ) ಹೊಸ ವರ್ಷದ ಮೊದಲ ದಿನ ಕಾಶಿ ವಿಶ್ವನಾಥ ಧಾಮಕ್ಕೆ ಸುಮಾರು 5ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. 800 ಕೋಟಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ದೇವಾಲಯ ಹಾಗೂ ಆವರಣ ಪುನರುತ್ಥಾನಗೊಂಡಿದೆ. 'ಕಾಶಿ ಕಾರಿಡಾರ್'ಅನ್ನು ಪ್ರಧಾನಿ ಮೋದಿ ಇತ್ತೀಚೆಗೆ ಉದ್ಘಾಟಿಸಿದ್ದರು. ಇದಾದ ನಂತರದ ದಿನಗಳಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಕಾಶಿ ವಿಶ್ವಾನಾಥ ದೇವಾಲಯದ ಅಧಿಕೃತ ಮೂಲಗಳು ತಿಳಿಸಿವೆ.